Showing posts with label ಶ್ರೀಗುರು ಪದ್ಮನಾಭ ಯೋಗಿವರ್ಯನೆ ನಮಿಪೆ lakumeesha padmanabha teertha stutih. Show all posts
Showing posts with label ಶ್ರೀಗುರು ಪದ್ಮನಾಭ ಯೋಗಿವರ್ಯನೆ ನಮಿಪೆ lakumeesha padmanabha teertha stutih. Show all posts

Saturday 1 May 2021

ಶ್ರೀಗುರು ಪದ್ಮನಾಭ ಯೋಗಿವರ್ಯನೆ ನಮಿಪೆ ankita lakumeesha padmanabha teertha stutih

 ರಾಗ  ನಾದನಾಮಕ್ರಿಯ  ತಾಳ : ಆದಿ 


ಶ್ರೀ ಗುರು ಪದ್ಮನಾಭ 

ಯೋಗಿವರ್ಯನೆ ನಮಿಪೆ ।

ಭಾಗವತರ ಸಂಗಾ 

ಇತ್ತೆನ್ನ ರಕ್ಷಿಸಯ್ಯ ।। ಪಲ್ಲವಿ ।।


ಭೋಗಾದಿಗಳ ದುಷ್ಟ 

ರೋಗಾದಿ ಬಳಲೂತ ।

ನಾಗಶಯ್ಯಗೆ ನಿತ್ಯ 

ಬಾಗದೆ ಕೆಟ್ಟೆನಯ್ಯ ।। ಅ ಪ ।।


ಮಧ್ವರಾಯರೊಡನೆ 

ವಾದದಿ ನೀ ಸೋತು ।

ಸದ್ವೈಷ್ಣವ ಮತವ 

ಪೊಂದಿ ಶಿಷ್ಯನಾಗುತಲೀ ।

ಉದ್ಧರಿಸಬೇಕೆನೆ 

ಮುದ್ರಾಂಕಿತನ ಮಾಡಿ ।

ಪದ್ಧತಿಲಿ ಸರ್ವಜ್ಞರು 

ಗದ್ದುಗೆ ಕೊಡೆಗೊಂಡಾ ।। ಚರಣ ।।


ಪರದೆಯೊಳಗೆ ಕುಳಿತು 

ವರ ಸಾಸಿರ ವದನದಿ ।

ಗುರುಗೈದ ಭಾಷ್ಯಕೆ 

ಪರಿಪರಿ ಅರ್ಥ ಪೇಳಿ ।

ಭರದಿ ಶಿಷ್ಯರಿಗೆಲ್ಲ 

ತ್ವರ ಉಪದೇಶ ನೀಡಿ ।

ಧರಣೀಜೆ ಮೂಲರಾಮನ 

ಹರುಷದಿ ಒಲಿಸಿದ ।। ಚರಣ ।।


ಸತ್ತರ್ಕದೀಪಾವಲೀ 

ಸನ್ನ್ಯಾಯರತ್ನಾವಲೀ ।

ಉತ್ತಮ ಗ್ರಂಥ ರಚಿಸಿ 

ಬತ್ತರಿಸುತಲಿ ।

ಸತ್ಯಭಾಮೆಯ ಪ್ರಿಯ 

ಶ್ರೀ ಲಕುಮೀಶನ ।

ಚಿತ್ತದಿ ಧ್ಯಾನದಿ ತುಂಗೆ 

ನಡುಗಡ್ಡಿ ಸೇರ್ದಾ ।। ಚರಣ ।।

*****