ಗುರು ರಾಘವೇಂದ್ರ ಬರಿ ಪದವಲ್ಲ
ಗುರಿ ಸಾಧನೆಗೇರಿಸೋ ನಿಚ್ಚಣಿಕೆ ಕೇಳು
ಭವ ಕಡಲಲಿ ಹಡಗೇರಿಸೋ ನಿಚ್ಚಣಿ
ರವಿಸುತನವಕೃಪೆ ತಪ್ಪಿಸೊ ನಿಚ್ಚಣಿ
ಜವನ ಬಾದೆಯಲಿ ವೈಕುಂಠಕೆ ನಿಚ್ಚಣಿ
ಕವಿದ ಕತ್ತಲ ಕಳೆದು ಸವಿಯನು ತುಂಬಿಸೋ
ಶ್ರೀ ರಾಮನ ಸೇವೆಗೆ ಪ್ರೇರಿಸೋ ನಿಚ್ಚಣಿ
ಪ್ರೇರಿಸಿ ಗೆಲುವನು ದೊರಕಿಸೋ ನಿಚ್ಚಣಿ
ಪರಿ ಪರಿ ಕೆಸರಿಂದ ಎಬ್ಬಿಸೋ ನಿಚ್ಚಣಿ
ಅರಿಯ ಹರಿದು ನರಹರಿಯ ತೋರಿಸುವಂತ
ಹಣಕೆ ದೊರೆಯದಂತ ನಿಚ್ಚಣಿ ಇದು
ಕಣ್ಣಿಗೆ ಕಾಣದ ನಿಚ್ಚಣಿ
ಒಣ ಭೊಟಾಟಿಕೆ ಒಲ್ಲದ ನಿಚ್ಚಣಿ ಇದು
ಗುಣ ಪರಿಪೂರ್ಣ ತಂದೆ ಹಯನ ಪುರವ ತೋರೋ
***********