Showing posts with label ರಥವಾನೇರಿದಾ ಯತಿ gurujagannatha vittala varadendra teertha stutih. Show all posts
Showing posts with label ರಥವಾನೇರಿದಾ ಯತಿ gurujagannatha vittala varadendra teertha stutih. Show all posts

Friday, 27 December 2019

ರಥವಾನೇರಿದಾ ಯತಿಕುಲನಾಥಾ ankita gurujagannatha vittala varadendra teertha stutih

by ಗುರುಜಗನ್ನಾಥದಾಸರು
ಶ್ರೀ ವರದೇಂದ್ರರು

ರಥವಾನೇರಿದಾ ಯತಿಕುಲನಾಥಾ ಸದ್ಗುಣ ವಿಖ್ಯಾತಾ ಪ

ವಿತತಸುಮಹಿಮಾ-ನತ- ಜನ-ತತಿ- ಕೃತ
ಸ್ತುತಿಗೆ ಒಲಿವ - ಯತಿ ವರದೇಂದ್ರಾ ಅ.ಪ

ಪತಿತಾ ಪಾವನ ತಾನೆನಿಸುತ ಮೆರವಾ -ಅತಿಹಿತದಲಿ ಭಕುತರ ಕರಪಿಡಿವಾ -ನುತಿಸುವ ಜನ-ತತಿ- ಗತಿಹಿತದಲಿ ಸೂ-ಪಥವ ತೋರಿಸಿ ಸ -ದ್ಗತಿಯ ನೀಡುವೆನೆಂದು 1

ದಶಮತಿಸಮಯಾಖ್ಯಾಭ್ಧಿಶಶಾಂಕಾ- ತಾನಿಹನಕಳಂಕವಸುಧೀಂದ್ರರಕರ- ಬಿಸಜೋದ್ಭವ ತಾವಸುಧಿಯನಾಳುವ - ಕುಸುಮದಳಾಂಬಕ 2

ಧಾತಾಂಶರಿಂದಲಿ ತಾನುದ್ಭವಿಸೀ - ಸದ್ಗುರುವರನೆನಿಸಿಧೂತ - ಪಾಪಾತ್ಮಕನು ತಾನಾಗೀ - ಶ್ರೀಹರಿಗೆ ಬೇಕಾಗಿಪ್ರೀತಿಲಿ ಭಜಿಸುತ - ದೂತರ ಪೊರೆವಾ 3
********