ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ನಮ್ಮಸ್ವಾಮಿ ಸಕಲಾಂತರ್ಯಾಮಿ ಪ್ರಕಟ ಸಹಸ್ರನಾಮಿ ಭಕ್ತಜನ ಪ್ರೇಮಿ P
ಒಳಗೆ ನೋಡಿ ನಿಮ್ಮ ಹೊಳೆವ ಪರಬ್ರಹ್ಮ ತಿಳಿಯಲಿಕ್ಕೆ ನೋಡಿವರ್ಮ ಅಳಿಯಬೇಕು ಹಮ್ಮ 1
ಸ್ವಸ್ತ ಮನಮಾಡಿ ವಸ್ತು ಇದೇ ನೋಡಿ ಅಸ್ತವ್ಯಸ್ತ ಬ್ಯಾಡಿ ಸಾಭ್ಯಸ್ತ ನಿಜಗೂಡಿ 2
ಬಿಟ್ಟು ನಿಜಖೂನ ಕೆಟ್ಟು ಹೋಗುದೇನ ಗುಟ್ಟು ಮಹಿಪತಿಗಿದೆ ಮುಟ್ಟಿ ಗುರುಙÁ್ಞನ 3
***