ಸರ್ವೇಶಾ ಪಾಹಿ ರಮೇಶಾ
ಜಗದಾಭಿರಾಮನಿಗೆ ಮಿಗಿಲಾರು ಲೋಕದೊಳಗೆ ಪ
ವರ ವಾಲ್ಮೀಕಿ ಮುನಿಯು ಮುರನೆಂದು ಸ್ಮರಿಸಿದದಕೆ
ಕರುಣಾಳು ನೀನಾವದಕೆ ತ್ವರ ಕೃಪೆಯ ಮಾಡಿದದಕೆ 1
ಪರಮಾಂಜನೆಯ ಸುತಗೆ ಸ್ಥಿರ ಪದವಿಯ ನಿತ್ತದದಕೆ
ಧರಣೀಶ ತವ ಚರಣಕೆ ಶಿರಬಾಗಿ ಬೀಳ್ವದದಕೆ 2
ನಿನ್ನ ಪಾದ ಸೋಕಿಂದದಕೆ ಘನ ಶಿಲೆ ವನಿತೆಯಾದದಕೆ
ಹನುಮೇಶವಿಠಲನೆಂಬೋದಕೆ ಅನುಮಾನಬಾರದದಕೆ 3
****