Showing posts with label ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ gopalakrishna vittala. Show all posts
Showing posts with label ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ gopalakrishna vittala. Show all posts

Sunday, 1 August 2021

ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ankita gopalakrishna vittala

ಐದನೆ ವರ್ಷದ ಅಂತ್ಯ ಭಾಗದೊಳಗೆ

ಐದುವೊ ಮಾರ್ಗವನು ನಿಶ್ಚಯಿಸಿದೆ ಪ.


ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ

ಮೋದಗುರುಗಳು ಬೋಧಿಸೆ | ದಯದಿ ಅ.ಪ.


ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ

ಐದು ಇಂದ್ರಿಯವು ಕಲೆತು

ಐದು ಭೂತನ ಕಾಯ ಐದಲಾರದು ಜೊತೆಗೆ

ಐದುವುದು ಕರ್ಮ ಒಂದು

ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು

ಮೋದವಾಗುತ ಮನದೊಳು

ಆದಿದೈವನ ಕರುಣವಾದ ಬಳಿಕಿನ್ನೇನು

ಪಾದಪದ್ಮವ ತೋರೆಲೊ | ಸ್ವಾಮಿ 1

ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ

ಐದಿಸಿ ಮೂಲಸ್ಥಳಕೆ

ಐದು ರೂಪಾತ್ಮಕನ ಆದರದಿ ಪೂಜಿಸುತ

ಐದೊಂದು ದೂರ ತ್ಯಜಿಸಿ

ಐದು ನಾಲ್ಕು ತತ್ವದಧಿಪತಿಗಳನು

ಆದರದಿ ಧ್ಯಾನಮಾಡಿ

ಐದು ಮೂರು ದಳದಿ ಆದಿತ್ಯನಂತಿರುವ

ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2

ಐದು ಭೇದಗಳ ಮತ ಸ್ಥಾಪಕರ ಕರುಣದಲಿ

ಐದು ಮೂರನೆ ಖಂಡಿಸಿ

ಐದೆರಡು ರೂಪಕನ ಆದರದಿ ಸ್ತುತಿಸುತ್ತ

ಭೇದಿಸಿ ಹೃದಯಗ್ರಂಥಿ

ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ

ಆದರದಿ ನಂಬಿ ಸ್ತುತಿಸಿ

ಈ ದಾರಿ ಕಾಣಲು ಇದಕೆ ಕಾರಣದಿವ್ಯ

ಮೋದ ಶ್ರೀಗುರು ಕರುಣವೋ | ದಯವೋ 3

****