Showing posts with label ಬಿಟ್ಹ್ಯಾಗೆ ಇರಲಿನ್ನೀ ಚರಣ ರಂಗ gopalakrishna vittala. Show all posts
Showing posts with label ಬಿಟ್ಹ್ಯಾಗೆ ಇರಲಿನ್ನೀ ಚರಣ ರಂಗ gopalakrishna vittala. Show all posts

Monday, 2 August 2021

ಬಿಟ್ಹ್ಯಾಗೆ ಇರಲಿನ್ನೀ ಚರಣ ರಂಗ ankita gopalakrishna vittala

ರಾಗ - : ತಾಳ -


ಬಿಟ್ಹ್ಯಾಗೆ ಇರಲಿನ್ನೀ ಚರಣ l ರಂಗ ll ಪ ll


ವಿಟ್ಠಲನಾ ಪುಟ್ಟ ಚರಣ

ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ

ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ ll ಅ ಪ ll


ಭಕ್ತರಿಗೊಲಿಯುವ ಚರಣ l ವೇದ 

ಉಕ್ತಿಗೆ ನಿಲುಕದ ಚರಣ 

ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದು 

ಹಸ್ತದಿ ಚಕ್ರವ ಪಿಡಿದು ಬಂದಾ ಚರಣ ll ೧ ll


ಬಲಿಯನ್ನು ತುಳಿದಂಥಾ ಚರಣ l ಮೂರು

ಇಳೆಯನಳೆದ ಪುಟ್ಟ ಚರಣ

ಕುಲಕೋಟಿ ಉದ್ಧಾರಗೈವಂಥ ಗಂಗೆಯ

ಚೆಲುವ ಉಂಗುಟದಲ್ಲಿ ಪಡೆದ  ಕೋಮಲ ಚರಣ ll ೨ ll


ಹಸ್ತಿ ಕರೆಯೆ ಬಂದ ಚರಣ l ಲಕ್ಷ್ಮೀ

ವತ್ತುವೋ ಮೃದುತಳ ಚರಣ 

ಚಿತ್ತದೆ ಚಿಂತಿಪ ಭಕ್ತರ ಮನದೈವ

ತೆತ್ತಿಗನಾಗಿ ಐವರ ಪೊರೆದಾ ಚರಣ ll ೩ ll


ಭೀಮ ತೀರಾ ವಾಸ ಚರಣ l ಭಕ್ತ 

ರಾಮಯ ಹರಿಸುವ ಚರಣ

ಕಾಮಜನಕ ಪಾಂಡುರಂಗವಿಟ್ಠಲನೆಂದು 

ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣ ll ೪ ll


ಬಿಟ್ಟಿರಲಾರೆ ನೀ ಚರಣ l ಮನದಿ 

ಕಟ್ಟಿ ಹಾಕುವೆ ನಾ ನೀ ಚರಣ

ದಿಟ್ಟ ಶ್ರೀ ಗೋಪಾಲಕೃಷ್ಣವಿಟ್ಠಲ ಚರಣ

ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ ll ೫  ll

***


ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ ಪ.


ವಿಠ್ಠಲನಾ ಪುಟ್ಟ ಚರಣ

ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ

ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ ಅ.ಪ.


ಭಕ್ತರಿಗೊಲಿಯುವ ಚರಣಾ | ವೇದ

ಉಕ್ತಿಗೆ ನಿಲುಕದ ಚರಣಾ

ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದು

ಹಸ್ತದಿ ಚಕ್ರವ ಪಿಡಿದು ಬಂದಾ ಚರಣ 1

ಬಲಿಯನ್ನು ತುಳಿದಂಥ ಚರಣಾ | ಮೂರು

ಇಳೆಯನಳೆದ ಪುಟ್ಟ ಚರಣ

ಕುಲಕೋಟಿ ಉದ್ಧಾರಗೈವಂಥ ಗಂಗೆಯ

ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ 2

ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿ

ವತ್ತುವೋ ಮೃದುತಳ ಚರಣಾ

ಚಿತ್ತದೆ ಚಿಂತಿಪ ಭಕ್ತರ ಮನದೈವ

ತೆತ್ತಿಗನಾಗಿ ಐವರ ಪೊರೆದಾ ಚರಣ3

ಭೀಮ ತೀರಾ ವಾಸ ಚರಣಾ | ಭಕ್ತ

ರಾಮಯ ಹರಿಸುವ ಚರಣಾ

ಕಾಮಜನಕ ಪಾಂಡುರಂಗವಿಠ್ಠಲನೆಂದು

ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ 4

ಬಿಟ್ಟಿರಲಾರೆ ನೀ ಚರಣ | ಮನದಿ

ಕಟ್ಟಿ ಹಾಕೂವೆ ನಾ ನೀ ಚರಣ

ದಿಟ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಚರಣ

ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ 5

****