Showing posts with label ನೋಡಿದೆನು ಶ್ರೀ ಶೈಲವಾಸನ ನೋಡಿದೆನು ಪಾರ್ವತಿರಮಣನಾ narasimhavittala. Show all posts
Showing posts with label ನೋಡಿದೆನು ಶ್ರೀ ಶೈಲವಾಸನ ನೋಡಿದೆನು ಪಾರ್ವತಿರಮಣನಾ narasimhavittala. Show all posts

Tuesday 3 August 2021

ನೋಡಿದೆನು ಶ್ರೀ ಶೈಲವಾಸನ ನೋಡಿದೆನು ಪಾರ್ವತಿರಮಣನಾ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ನೋಡಿದೆನು ಶ್ರೀ ಶೈಲವಾಸನ | ನೋಡಿದೆನು

ಪಾರ್ವತಿರಮಣನಾ

ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1

ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ

ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2

ಶುದ್ಧ ಸ್ನಾನವ ಮಾಡಿನಾನು | ವಿಧ್ಯುಕ್ತದಿಂದಲಿ |

ಅಲ್ಲಿದ್ದ ಜನರ ಸಹಿತಾಗಿ

ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ

ಕೃಷ್ಣಧ್ಯಾನವ ಮಾಡುತ

ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3

ನಿಸ್ಸೀಮಗುಣಗಣಧಾಮ | ಅರಿಯದಮನ | ಸಾರ್ವಭೌಮ

ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4

ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ

ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5

ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ

ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6

ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ

ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7

ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು

ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8

ರಂಗ ಸಂಗದಿ ಜನಿತ ಪಾತಾಳಗಂಗಿ ಉದಕವು ತಂದು

ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9

ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ

ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10

ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ

ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11

ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ

ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12

ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು

ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13

ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ

ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14

***