ಶೋಧಿಸಿ ನೋಡಿರೋ ಸದಾ ಬೋಧದ ನಿಜಬೋಧ ಪ
ಸಾಧಿಸಿ ನೋಡಿ ಸದ್ಗುರು ಕೃಪೆಯಿಂದ ಸಾಧನಕೆದುರಿಡುವುದು ಆನಂದ ಭೇದಿಸಿ ನೋಡುವದಿದೇ ತನ್ನಿಂದ ಆದಿ ಅನಾದಿದೇ ಸಹಜಾನಂದ 1
ತಂದುವಿಡಿದರಂತತ್ತೆ ನೋಡಿ ಎಂತೆಂತೀಹ್ಯ ನಿಜದಂತೆ ಗೂಡಿ ಅಂತರಾತ್ಮದಲೆ ಅನುಭವ ಬೆರೆದಾಡಿ ಸಂತತ ಸದಮಲ ಸುಖಸೂರ್ಯಾಡಿ 2
ವಿಹಿತಕೆ ವಿಹಿತಾಗುವ ಸುಪಥ ದ್ವೈತಾದ್ವೈತಕಿದೆ ರಹಿತ ಮಹಾಮಹಿಮರ ಆನಂದಭರಿತ ಮಹಿಪತಿ ಮನೋನ್ಮನದ ಸುವಸ್ತ 3
***