Showing posts with label ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ hanumesha vittala. Show all posts
Showing posts with label ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ hanumesha vittala. Show all posts

Tuesday 1 June 2021

ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ankita hanumesha vittala

 ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ

ಹೀಗೆ ದಿನಗಳಿವಂಗನಿಗೆ ಪ


ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ

ತಿಳಿದ್ಹಾಗೆ ನಡೆವಳ ಅ.ಪ.


ಉದಯದಲೆದ್ದತಿ ಸಜಮಲಳಾಗಿ ತಾ

ಮುದದಿ ಪತಿಗೆ ನಮಿಸದವಳಿಗೆ

ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ

ಮಾಧವನ ಭಕ್ತಿಲಿ ಸ್ತುತಿಸದವಳಿಗೆ

ಪದುಮನಾಭನೇ ಸರ್ವಪರನೆಂದು ಅರಿಯದೆ

ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1


ಹರಿದಿನದಲಿ ಉಂಡು ಹರಿಯನ್ನದಲೇ ಊರ

ತಿರುಗಿ ಹೊತ್ತು ಕಳೆವಳಿಗೆ

ಸರಸದಿ ನರಹರಿ ನಾಮ ಸಂಕೀರ್ತನೇ

ಇರುಳು ಜ್ಯಾಗರ ಮಾಡದವಳಿಗೆ

ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ

ತರು ಹೋಗೆನುತ ತನ್ನ ಪತಿ ಹೊರಗ್ಹಾಕ್ವಳ 3


ಗುರು ಹಿರಿಯರ ಅತ್ತೆಮಾವರ ಜರಿದು ತಾ

ಹಿರಿಯಳು ಮನಿಗೆ ನಾನೆನುತಿರ್ಪಳು

ಪರರ ನಿಂದಿಸಿ ಭೂಸುರರು ಬಂದರೆ ಅನ್ನ

ದೊರಕದೆನುತ ಹೇಳಿ ಕಳಹುವಳ

ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ

ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3


ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ

ಪತಿಯ ಸೇವೆ ಮಾಡದಿರುವಳಿಗೆ

ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ

ಪರ ಪತಿ ನೋಡ್ವಳಿಗೆ

ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ

ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4


ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ

ಐವರ ಕೂಡ ಧಾರೆಯರೆಸಿಕೊಂಡಾ

ಪರಮ ಪಾವನಳಾದ ಭಾರತೀ ದೇವೇರ

ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5


ವನವಾಸದಲಿ ಪಾಂಡು ತನಯರ ಕೂಡ ತಾ

ಧನ ಸುಖ ಬೇಡದೆÀ ಪೋದವಳು

ಘನ ಹಸಿವುತೃಷೆಯಿಂದ ಅನ್ನ ಬೇಡಿದ

ದುರ್ವಾಸಾದಿಗಳನು ಆದರಿಸಿದವಳಾ

ಆಜನನಿ ದೃಪವ ನಂದನಿಯ ಕೃತ್ಯಗಳನ್ನು

ನೆನೆದು ತನ್ನಯ ಮನವನ್ನು ತೊಳೆಯದವಳು 6


ಮರುತಂತರ್ಗತ ಸ್ವಾಮಿ ಸಲಹೆನ್ನದೇ

ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ

ನರಕ ಸಾಧನ ಕರ್ಮ ಮಾಡ್ವಳಿಗೆ

ಪರಮ ಪಾವನನಾದ ಹನುಮೇಶವಿಠಲನ

ನೆರೆ ನಂಬದಲೇ ದೇಹ

ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7

****