Showing posts with label ತೊರವೆಪುರನಿವಾಸ ನರಸಿಂಹ ನೀಹೊರೆಯೊ prasannavenkata. Show all posts
Showing posts with label ತೊರವೆಪುರನಿವಾಸ ನರಸಿಂಹ ನೀಹೊರೆಯೊ prasannavenkata. Show all posts

Tuesday, 12 November 2019

ತೊರವೆಪುರನಿವಾಸ ನರಸಿಂಹ ನೀಹೊರೆಯೊ ankita prasannavenkata

by ಪ್ರಸನ್ನವೆಂಕಟದಾಸರು
ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.

ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1

ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2

ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
********