Showing posts with label ಎಂತು ಜೀವಿಸಲಮ್ಮ ರಂಗನನ್ನಗಲಿ prasannavenkata. Show all posts
Showing posts with label ಎಂತು ಜೀವಿಸಲಮ್ಮ ರಂಗನನ್ನಗಲಿ prasannavenkata. Show all posts

Friday, 8 November 2019

ಎಂತು ಜೀವಿಸಲಮ್ಮ ರಂಗನನ್ನಗಲಿ ankita prasannavenkata

by ಪ್ರಸನ್ನವೆಂಕಟದಾಸರು
ಎಂತು ಜೀವಿಸಲಮ್ಮ ರಂಗನನ್ನಗಲಿ ಎನ್ನಂತರಪರಾಧವ ನೋಡದೊದಗನ್ಯಾಕೆ ಪ.

ಎಂದೆಂದು ತನ್ನ ಪೊಂದಿದಮಂದಮುಗ್ಧೆಯನುಕಂದರ್ಪಶರಕೆ ಗುರಿ ಮಾಡಬಹುದೆಇಂದುಕಾಂತಿಯು ಅಗ್ನಿಯಂದದಾಯಿತು ಹರಿಯೆಮಂದಸ್ಮಿತಸುಧೆಎನಗೆ ದೊರೆಯದಿರಲು1

ಶೃಂಗಾರ ಸೊಬಗ್ಯಾಕೆ ರಂಗನೀಕ್ಷಿಸದಿರಲುಅಂಗದಲಿಲ್ಲದೆ ಪ್ರಾಣ ಸುಖವಾರಿಗೆಕಂಗಳುದಣಿಯೆ ಅಘಭಂಗನ ದಿಟ್ಟಿಸಿ ನೋಡಿಪೊಂಗೊಳಲ ಸವಿ ರವವ ಕೇಳದಿರೆ ನಾನು 2

ವಿಪುಲ ತಾಪದಿ ಬಾಲೆ ನೊಂದಳೆಂಬ ಮಾತುಅಪಕೀರ್ತಿ ತನಗೆ ಅಲ್ಲವೇನೆ ತಂಗಿಶ್ರೀಪತಿ ಪ್ರಸನ್ವೆಂಕಟೇಶನು ನೆರೆದ ಸಂಭ್ರಮಕೆನಾ ಪಾವನಳಾದೆನೆ ಜಾಣೆ ನಿನ್ನಾಣೆ 3
*******