Showing posts with label ಇದಿರಾರೊ ಗುರುವೆ ಸಮರಾರೊ purandara vittala. Show all posts
Showing posts with label ಇದಿರಾರೊ ಗುರುವೆ ಸಮರಾರೊ purandara vittala. Show all posts

Tuesday, 3 December 2019

ಇದಿರಾರೊ ಗುರುವೆ ಸಮರಾರೊ purandara vittala

ಪುರಂದರದಾಸರು
ಇದಿರಾರೊ-ಗುರುವೆ-ಸಮರಾರೊ ಪ

ಮದನಜನಕಪ್ರಿಯ ಗುರುಮಧ್ವರಾಯಅ.ಪ

ಸನ್ನುತಮಹಿಮ ಪ್ರಸನ್ನವದನ ನಿನ-ಗನ್ಯನಲ್ಲವೊ ನೀಯೆನ್ನ ರಕ್ಷಿಸಬೇಕೋ ||ನಿನ್ನ ನೋಡಿದವರ್ಧನ್ಯರಾಗುವರುಎನ್ನ ದಯಾಮೂರ್ತಿ ಮನ್ನಿಸಿ ನೋಡೋ 1

ದುರ್ಜನರನು ಗರ್ಜೆನೆಯಿಂದ ಓಡಿಸಿಸಜ್ಜನರನು ಸಂರಕ್ಷಿಸಿದಾತನೆ |ಈ ಜಗದಲಿ ಮಧ್ಯಗೇಹರ ಪತ್ನಿಯಪೂಜ್ಯ ಜಠರದಲಿ ಜನಿಸಿದ ಧೀರ 2

ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿಸಾಧಿಸಿ ಹರಿಯೆ ಸರ್ವೋತ್ತಮನೆಂದು ||ಮೋದಭರಿತವಾದ ದಿವ್ಯಶಾಸ್ತ್ರವ ಗೈದಮೋದತೀರ್ಥ-ಪುರಂದರವಿಠಲದಾಸ3
******