Showing posts with label ನಂಬಿದೆ ನಿನ್ನಯ ಪಾದ ನಂಬಿದೆ sirigurutandevarada vittala. Show all posts
Showing posts with label ನಂಬಿದೆ ನಿನ್ನಯ ಪಾದ ನಂಬಿದೆ sirigurutandevarada vittala. Show all posts

Friday, 6 August 2021

ನಂಬಿದೆ ನಿನ್ನಯ ಪಾದ ನಂಬಿದೆ ankita sirigurutandevarada vittala

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 

ಪಾರ್ವತಿದೇವಿ


ನಂಬಿದೆ ನಿನ್ನಯ ಪಾದ ನಂಬಿದೆ ಪ

ನಂಬಿದೆ ನಿನ್ನಯ ಪಾದ ಜಗದಂಬೆ ಅರುಣೆ ಪಂಚಭೇದಾ ಆಹಾಶಂಭುವಿನರ್ಧಾಂಗಿ ಬಿಂಬನ ತೋರಿಸೆಅಂಬುಜೋದ್ಭವನ ಪ್ರತಿಬಿಂಬವ ರಾಣಿಯೆ ಅ.ಪ.


ಮನದಭಿಮಾನಿ ದೇವತೆಯೆ ಯನಮನವ ನಿಲ್ಲಿಸು ಪಾರ್ವತಿಯೆ ಆಹಾಮುನಿಜನ ವಂದ್ಯಳೆ ಮನ್ಮಥ ಜನನಿಯೆಸಾನುರಾಗದಲಿ ನೀ ಜ್ಞಾನ ಕೊಡುವೆಯೆಂದು 1


ಭಕ್ತವತ್ಸಲೆ ಭಾಗ್ಯದೇವಿ ಭವದಿಮುಕ್ತನ ಮಾಡೆಲವೋ ತಾಯೆ ಆಹಾಯುಕ್ತಿವಂತಳೆ ಹರಿ ಭಕ್ತ ಜನರೊಳುಭಕ್ತಿಯನ್ನೇ ಕೊಡು ಭಕ್ತರ ಸಾರಥಿ 2


ಶರಣು ಬಂದೆನೆ ನಾ ನಿನಗೆ ತವಚರಣ ಭಜನೆ ಕೊಡು ಎನಗೆ ಆಹಾಶರಧಿ ಶಯನ ತಂದೆವರದವಿಠಲನನ್ನುಪರಿಪರಿ ಸ್ತುತಿಸುವ ವರಕಾಳಿ ದೇವಿಯೆ3

***