Showing posts with label ಪಾಲಯಾ ದಯಾಪಯೋನಿಧೆ ಪಾಲಯ ಮಾಂ ಮಾಂತ್ರಾಲಯ tandevenkatesha vittala. Show all posts
Showing posts with label ಪಾಲಯಾ ದಯಾಪಯೋನಿಧೆ ಪಾಲಯ ಮಾಂ ಮಾಂತ್ರಾಲಯ tandevenkatesha vittala. Show all posts

Monday 6 September 2021

ಪಾಲಯಾ ದಯಾಪಯೋನಿಧೆ ಪಾಲಯ ಮಾಂ ಮಾಂತ್ರಾಲಯ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಆರಭಿ ತಾಳ: ಆದಿ


ಪಾಲಯಾ ದಯಾಪಯೋನಿಧೆ 

ಪಾಲಯ ಮಾಂ ಮಾಂತ್ರಾಲಯ ನಿಲಯ ಬು-

ಧಾಲಿಲಾಲಿತ ಕಲ್ಪೋಜ್ವಲಜಲಜಾ ಅ.ಪ

ಆಗಮಾ ನಿಗಮಾ ವಿದಗ್ಧ ಲಲಾಮ ಭಾಗವತಭೌಮ

ಯೋಗಮಾರ್ಗಕರ್ಮಾಗಮ ನಿರತ ವಿ-

ರಾಗಮನನೆ ಮಧ್ವಾಗಮಖಗಮಾ 1

ಗ್ರಂಥಿಹರ್ತಕಾ ಸದ್ವೈಷ್ಣವರಂಜನ ಗ್ರಂಥಕರ್ತುಕಾ

ಭ್ರಾಂತಪ್ರತ್ಯೂಹಕೃತಾಂತಕ ದೋಷ

ಧ್ವಾಂತದಿನೇಶ ಚಿರಂತನ ಮಹಿಮಾ 2

ವಂದಿತಾಮರ ಮಂದಾರ ವೃಂದಾವನ ಮಂದಿರಾಧ್ವರ

ಸ್ಯಂದನ ತಂದೆವೆಂಕಟೇಶವಿಠಲನ

ದ್ವಂದ್ವಪದಾಂಬುಜ ಬಂಧುರಭ್ರಮರಾ 3

***

ಬುಧಾಲಿಲಾಲಿತ ಕಲ್ಪೋಜ್ವಲ=ಜ್ಞಾನಿ ಸಮೂಹದಿಂದ 

ಮೆಚಲ್ಪಟ್ಟ ಕಾಂತಿಯುಕ್ತ ಚಂದ್ರ; 

ವಿದಗ್ಧಲಲಾಮ=ಅಗ್ರ ಪಂಡಿತ; 

ಭಾಗವತ ಭೌಮ=ಭಾಗವತ ಶ್ರೇಷ್ಠ; 

ವಿರಾಗಮನ=ವಿರಕ್ತ ಮನ; ಖಗಮ=ಪಕ್ಷಿ; 

ಗ್ರಂಥಿಹರ್ತಕಾ=ಸಂಸಾರವೆಂಬ ಗಂಟನ್ನು ಕತ್ತರಿಸುವವ; 

ಪ್ರತ್ಯೂಹ=ಅಡಚಣೆ; ಕೃತಾಂತಕ=ಯಮ, ಕೊನೆಗಾಣಿಸುವವನು;