ankita ಸಿರಿನಾರಾಯಣ
ರಾಗ: ಧಾನಿ ತಾಳ: ತ್ರಿ
ಗತಿಗೋತ್ರ ನೀ ಸುಯತೀಂದ್ರ
ಪಥ ತೋರೊ ಶ್ರೀರಾಘವೇಂದ್ರ ಪ
ಸ್ತುತಿಸಲು ಶ್ರೀ ಹರಿ ದಯಾಸಾಂದ್ರ
ಮತಿ ನೀಡು ಸುತ ಶ್ರೀಸುಧೀಂದ್ರ ಅ.ಪ
ಒಂದೇ ಸುಮನದಿ ನಿನ್ನ ಸ್ಮರಣ
ವಂದಿಸುವರಘರಾಶಿ ಹರಣ
ಪೊಂದುವರು ಸಕಲೇಷ್ಟ ಪೂರ್ಣ
ತಂದೆ ಉದ್ಧರಿಸು ಕಂದಳನ 1
ಪ್ರತಿ ದಿನ ಮೃತ್ತಿಕಾ ತೀರ್ಥಪಾನ
ಅತಿ ಸುಲಭ ವಿರಿಜಾ ನದಿ ಸ್ನಾನ
ಯತಿ ಸಾರ್ವಭೌಮಗೈದಾನ
ಸುತೆಗೆ ಶ್ರೀಪತಿ ಭಕ್ತಿ ಜ್ಞಾನ 2
ವರ ಮಂತ್ರಾಲಯ ತುಂಗವಾಸ
ಸಿರಿನಾರಾಯಣ ಮರುತ ದಾಸ
ಸುರಧೇನು ತರುಭಕ್ತ ಪೋಷ
ಗುರುರಾಜ ಭುವನೈಕ ಭೂಷ 3
***