..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಸುದ್ದಿಯ ಕೊಟ್ಟು ಬಾರೆ
ಬುದ್ಧಿ ಶರಧಿ ಸುಮ ಗಂಭೀರೆ ನೀರೆ ಪ
ಹದ್ದನೇರಿ ಮೆರೆವ ಮುದ್ದು ಮೋಹನ್ನ
ಇಂದುವದನ ಗೋಪಾಲಕೃಷ್ಣಗೆ ಅ.ಪ
ಮುಟ್ಟಳು ಅನ್ನ ಆಹಾರವನ್ನು
ಬಿಟ್ಟಳು ಇಷ್ಟ ಪದಾರ್ಥವೆಲ್ಲ
ದೃಷ್ಟೀಸಿ ನೋಡಳನ್ಯರು
ಸೃಷ್ಟೀಲಿ ಭಾರಜೀವಿತ
ಕಷ್ಟದೆಶೆಯಲಿರುವುಳೆಂದು1
ಇಡಳು ಕನಕಾಭರಣಂಗಳು
ತೊಡಳು ವರವಸ್ತ್ರಂಗಳು
ಬಡುವಾಗಿ ನಡು ಬಳುಕುತಿಹಳು
ಒಡೆಯ ನೀ ಬಾರದಿರಲು ಪ್ರಾಣ
ಬಿಡುವಳು ನಿಶ್ಚಯವೆಂದು 2
ಬಯಸುವಳು ನಿನ್ನ ಆಗಮನವನ್ನು
ಸಯಿಸಳು ವಿರಹ ತಾಪ
ಧ್ಯೇಯ ವಿಜಯ ರಾಮಚಂದ್ರವಿಠಲ
ಕೈಯಿ ಸೇರÉ ಸರ್ವಾವಯವ
ಕಾಯ ಸಮರ್ಪಿಸುವಳೆಂದು 3
***