Showing posts with label ಅಕ್ಕ ಕೊಳಲನೂದುವ ಸುಂದರನ್ಯಾರೇ ankita indiresha AKKA KOLALANOODUVA SUNDARANYAARE. Show all posts
Showing posts with label ಅಕ್ಕ ಕೊಳಲನೂದುವ ಸುಂದರನ್ಯಾರೇ ankita indiresha AKKA KOLALANOODUVA SUNDARANYAARE. Show all posts

Thursday, 23 December 2021

ಅಕ್ಕ ಕೊಳಲನೂದುವ ಸುಂದರನ್ಯಾರೇ ankita indiresha AKKA KOLALANOODUVA SUNDARANYAARE



by Pandurangi Huchchacharyaru 1860 - 1945 Bhadrapura village, Shimoga District
by ಪಾಂಡುರಂಗಿ ಹುಚ್ಚಾಚಾರ್ಯರು

ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ ||pa||

ಸುಂದರನ್ಯಾರೇ ನೋಡೋಣ ಬಾರೆ ||a.pa||

ಅಮ್ಮಮ್ಮಾ ಮಾರನಸ್ತ್ರವ ತಾಳಲಾರೆವೆ ಅಕ್ಕ|
ಬೊಮ್ಮನ ಪಿತನಂತಃಕರಣಿರಲೇ ಅಕ್ಕ ||1||

ಪತಿಯು ನಮ್ಮನು ಬಿಟ್ಟರೆ ಬಿಡಲೇ ಅಕ್ಕ
ರತಿಪತಿ ಪಿತನ ದಯವು ಇರಲೇ ಅಕ್ಕ ||2||

ಮನೆ ಧನವೆತ್ತ ಪೋದರೆ ಪೋಗಲೇ ಅಕ್ಕ
ಮನಸಿಜ ಪಿತನ ದಯವು ಇರಲೇ ಅಕ್ಕ ||3||

ಕಂದರ ಎತ್ತಲಾರೆವು ನಾವು ಕೇಳೇ ಅಕ್ಕ
ಕಂದರ್ಪ ಸುತನ ಕರೆದು ತಾರೇ ಅಕ್ಕ ||4||

ನೀರೆ ಪೋಗೋಣು ನಡಿ ಆ ವನಕೆ ಅಕ್ಕ
ಮಾರಸುಂದರನ ನೋಡುವುದಕ್ಕೆಇಂದಿರೇಶನ್ನ ಕರೆತರುವುದಕ್ಕೆ ||5||
*********

ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ ಪ

ಸುಂದರನ್ಯಾರೇ ನೋಡೋಣ ಬಾರೆ ಅ.ಪ.

ಅಮ್ಮಮ್ಮಾ ಮಾರನಸ್ತ್ರವ ತಾಳಲಾರೆವೆ ಅಕ್ಕಬೊಮ್ಮನ ಪಿತನಂತಃಕರಣಿರಲೇ ಅಕ್ಕ 1

ಪತಿಯು ನಮ್ಮನು ಬಿಟ್ಟರೆ ಬಿಡಲೇ ಅಕ್ಕರತಿಪತಿ ಪಿತನ ದಯವು ಇರಲೇ ಅಕ್ಕ 2
ಮನೆ ಧನವೆತ್ತ ಪೋದರೆ ಪೋಗಲೇ ಅಕ್ಕಮನಸಿಜ ಪಿತನ ದಯವು ಇರಲೇ ಅಕ್ಕ 3

ಕಂದರ ಎತ್ತಲಾರೆವು ನಾವು ಕೇಳೇ ಅಕ್ಕಕಂದರ್ಪ ಸುತನ ಕರೆದು ತಾರೇ ಅಕ್ಕ 4

ನೀರೆ ಪೋಗೋಣು ನಡಿ ಆ ವನಕೆ ಅಕ್ಕಮಾರಸುಂದರನ ನೋಡುವುದಕ್ಕೆಇಂದಿರೇಶನ್ನ ಕರೆತರುವುದಕ್ಕೆ 5

***


pallavi

akkA koLaLanUduva sundaranyArE akkA

anupallavi

sundaranyare nODona bArE

caraNam 1

ammammA maraNAstrava talalareve akkabommana pitanantahkaranirale akkA

caraNam 2

patiyu nammanu biTTare biDale akkaratipati pitana dayavu irale akkA

caraNam 3

mane dhanavetta podare pogaLe akka manasija pitana dayavu irale akkA

caraNam 4

kandara ettalarEvu navu kELE akka kandarpa sutana karedutare akkA

caraNam 5

nIrE pOgoNu nadi A vanake akkamara sundarana nODuvudakke indirEshanna karetaruvudakke
***