Showing posts with label ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ purandara vittala. Show all posts
Showing posts with label ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ purandara vittala. Show all posts

Thursday, 5 December 2019

ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ purandara vittala

ಪುರಂದರದಾಸರು
ರಾಗ ಆರಭಿ. ಅಟ ತಾಳ

ಚಂದ್ರಗಾವಿಯನಿಟ್ಟು ದುಂಡು ಮುತ್ತನೆ ಕಟ್ಟಿ ಪಿಂಡ್ಯಾದ ರುಳಿಯನಿಟ್ಟು
ಗೆಂಗಾವಿನ ಹಾಲ ಹರವಿಯೊಳಿಟ್ಟುಕೊಂಡು ಬಂದಳೆ ಕೇರಿಗಾಗಿ ||೧||

ಸಂಜೆರಾಘವನುಟ್ಟು ಸಂಜನೋಲೆಯನಿಟ್ಟು ಪಂಜರದರಗಿಣಿಯ
ಅಂಜಲಿ ಮೇಲಿಟ್ಟು ಮುದ್ದನಾಡುತ ರಂಗನಿದ್ದ ಕೇರಿಗೆ ಬಂದಳು ||೨||

ಹಾಲ ಕೊಳ್ಳಿರೆಂದು ಸಾರಿದಳೀ ಬಾಲೆ ಕೇರಿ ಕೇರಿಯೊಳಗೆ
ಬಾಲ ಸ್ತ್ರೀ ಪುರುಷರು ಲಾಲಿಸಿ ಕೇಳ್ದರು ಹಾಲಿನ ಬೆಲೆಗಳನು ||೩||

ಹಾಲು ಮಾರುವ ಧ್ವನಿಯಾಲಿಸಿ ರಂಗಯ್ಯ ಮೇಲಿನ ಕೇರಿಯೊಳು
ನಾಳೆ ನಮ್ಮನೆಯಲ್ಲಿ ಪ್ರಸ್ತವೀಳ್ಯಗಳುಂಟು ಹಾಲೆನ್ನ ಇರಿಸೆಂದನು ||೪||

ಕೊಂಬವ ನೀನಲ್ಲ ಡಂಭಕತನವೇತಕೊ ಗಂಡನುಳ್ಳವಳು ನಾನು
ಭೂಮಂಡಲದೊಳಗುಳ್ಳ ಅರಸರ ಕೂಡ್ಹೇಳಿ ದಂಡ ತರಿಸುವೆನೆಂದಳು ||೫||

ಬಾಲೆ ಮಾನಿನಿರನ್ನೆ ಲೋಲಾಕ್ಷಿ ಲಾಲಿಸಿ ಈಗ ನಾ ನುಡಿವ ಮಾತ
ಹಾಲಿನ ಬೆಲೆ ಹೇಳೆ ಏನು ಮಾನಿನಿರನ್ನೆ ಬೇಡಿದ್ದ ಕೊಡುವೆನೆಂದ ||೬||

ಏಕೆಲವೊ ಇಂಥ ಪುಂಡತನವು ಸಲ್ಲ ಕಮಲಜಾತಜನಕ
ನಾ ಕಾಯಿಸಿದ ಒಳ್ಳೆ ಎಮ್ಮೆಯ ಹಾಲಿದು ಒಮ್ಮನೆ ಹೊನ್ನೆಂದಳು ||೭||

ಕೈಯಲ್ಲಿ ಕೊಳಲು ನೊಸಲ ನೀಳದ ನಾಮ ಆಲದ ಮರನಡಿಯೆ
ಬಾಲೆ ಮೊದಲು ಹಾಲ ಮಾರಿದ ಸುಂಕಕೆ ನೀಲ ಸೆರಗ ಪಿಡಿದ ||೮||

ಅಡವಿಗಂಕೆಗಳಿಲ್ಲ ಕೊಡಕೆ ಸುಂಕಗಳಿಲ್ಲ ತಡೆವವ ನೀನಾರೆಲೊ
ನಡೆ ಊರ ಮುಂದಕ್ಕೆ ತಳವಾರರೊಯ್ದರೆ ಹದನ ಪೇಳುವೆನೆಂದಳು ||೯||

ಬಲ್ಲೆ ಬಲ್ಲೆನು ನಿನ್ನ ಬಗೆಯ ಮಾತುಗಳೆಲ್ಲ ಎಲ್ಲಿಯ ತಳವಾರರೆ
ಹಾಗಲ್ಲದಿದ್ದರೆ ಒಂದು ವೀಳ್ಯವ ತೆಕ್ಕೊಂಡು ಅಲ್ಲಲ್ಲಿ ದೂರದಿರೆ ||೧೦||

ಕೆಟ್ಟನಲ್ಲೊ ಕೃಷ್ಣ ಇತ್ತಲೇತಕೆ ಬಂದೆ ಅತ್ತೆ ಮಾವಂದಿರುಂಟು
ಬಿಟ್ಟು ಬಿಡುವರೆನ್ನ, ಸರಸವಾಡಲು ಸಲ್ಲ, ಕಟ್ಟಿ ಕೊಂಬೆನು ಕಾಲನು ||೧೧|

ಮಾನಿನಿಮಣಿ ಕೇಳೇ ನಾಗಸಂಪಿಗೆ ಹೂವ ಜಾಣರು ಬಿಡುವರೇನೆ
ಜಾಣತನದ ಮಾತು ಆಡೋದು ತರವಲ್ಲ ಏಣಾಕ್ಷಿ ಲಾಲಿಪುದು ||೧೨ ||

ಹೊತ್ತು ಹೋಯಿತು ರಂಗ ಇನ್ನಾರಿಗ್ಹೇಳಲಿ ಅತ್ತಿಗೆ ಮೈದುನರು
ಮತ್ತೆ ನಿನ್ನೊಡನಾಡುವುದ ಕೇಳ್ದರೆ ಕುಟ್ಟಿ ಎನ್ನ ಕೆಡವರೆಂದಳು ||೧೩||

ದುಂಡು ಮಲ್ಲಿಗೆ ಹುವ ಕಂಡರೆ ಬಿಡುವರೆ ಪುಂಡರೀಕಾಕ್ಷಿ ಕೇಳು
ದಂಡಿಸದಿರು ಎನ್ನ ಅಂಡಲಿಸಲು ಬೇಡ ಗಂಡನೊಡನೆ ನುಡಿದು ||೧೪||

ಏತಕಿನಿತು ಛಲ ಎನ್ನೊಳಗೀ ಪರಿ ಮಾತುಳಾಂತಕ ಕೃಷ್ಣಯ್ಯ
ಮಾತು ಮಾತಿಕೆ ಪರಿಯಿದು ತರವಲ್ಲ ಬಿದ್ದರೆ ಅರಿತನವ ||೧೫||

ಕಣ್ಣಿಲಿ ಕಂಡ ಮೇಲಿದ ಬಿಡುವವರುಂಟೆ ಎಣ್ಣಿಸ ಬೇಡ ನೀನು
ಬೆಣ್ಣೆ ಕಳ್ಳನು ಕೃಷ್ಣ ಕಣ್ಣ ಸನ್ನೆಯ ಮಾಡಿ ಹೆಣ್ಣ ಮೋಹಿಸುತಿದ್ದನು ||೧೬||

ಮಾವ ಸೆರಗ ಬಿಡೊ, ಭಾವ ಸೆರಗ ಬಿಡೊ, ಮಾವಯ್ಯ ಬಿಡು ಸೆರಗ
ಮಾವನು ನಾನಲ್ಲ, ಭಾವನು ನಾನಲ್ಲ, ನಿನ್ನ ಮಾವನ ಮಗನು ಕಾಣೆ ||೧೭||

ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ, ಅಣ್ಣಯ್ಯ ಬಿಡು ಸೆರಗ
ಅಣ್ಣನು ನಾನಲ್ಲ, ತಮ್ಮನು ನಾನಲ್ಲ, ನಿನ್ನಣ್ಣನ ಭಾವ ಕಾಣೆ ||೧೮||

ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ, ಕಂದಯ್ಯ ಬಿಡು ಸೆರಗ
ಕಂದನು ನಾನಲ್ಲ, ತಂದೆಯು ನಾನಲ್ಲ, ನಿನ್ನ ಕಂದನ ತಂದೆ ಕಾಣೆ ||೧೯||

ನೆತ್ತಿ ಮೇಲಿನ ಕೊಡ ಎತ್ತಿ ನೀಡಾಡಲು ಅಪ್ಪಿಕೊಂಬಳೆ ಕೃಷ್ಣನ
ಭಕ್ತರ ಸಲಹುವ ಪುರಂದರವಿಠಲನ ಚಿಕ್ಕ ವೆಂಕಟರಾಯನ ||೨೦||
***

pallavi

candrakAviyaniTTu. rAgA: Arabhi. aTa tALA.

1: candrakAviyaniTTu duNDu muttane kaTTi piNDyAdaruLiyaniTTu
gengAvina hAla haraviyoLiTTu koNDu bandaLe kErigAgi

caraNam 2

sanjirAgavanuTTu sajjanOleyaniTTu panjaradara giNiya
anjali mEliTTu muddanADuta ranganidda kErige bandaLu

caraNam 3

hAla koLLirendu sAridaLI bAle kEri kEriyoLage
bAla strI puruSaru lAlisi kELdaru hAlina belegaLanu

caraNam 4

hAlu mAruva dhvaniyAlisi rangayya mElina kEriyoLu
nALe nammaneyalli prastavILyagaLuNTu hAlenna irisendanu

caraNam 5

kombava nInalla Dambaka tanavEtako gaNDanuLLavaLunAnu
bhUmaNDaladoLaguLLa arasara kUDhELi daNDa terisuvenendaLu

caraNam 6

bAle mAniniranne lOlAkSi lAlisi Iga nA nuDiva mAta
hAlina bele hELe Enu mAniniranne bEDidda koDuvenenda

caraNam 7

Ekelavo intha puNDatanavu salla kamalajAta janaka
nA kAyisida oLLe emmeya hAlidu ommane honnendaLu

caraNam 8

kaiyalli koLalu nosala nILada nAma Alada maranaDiye
bAle modalu hAla mArida sunkake nIla seraga piDida

caraNam 9

aDavigangegaLilla koDake sunkagaLilla taDevava nInArelo
naDe Ura mundakke taLavAraloidare hadana pELuvenendaLu

caraNam 10

balle ballenu ninna bageya mAtugaLella elliya taLavArare
hAgalladiddare ondu vILyavadekkoNDu allalli dUradire

caraNam 11

keTTanallo krSNa ittaleke bande atte mAvandiruNDu
biTTu biDuvarenna sarasavADalu salla kaTTi kombenu kAlanu
1
caraNam 2

mAnini maNi kELE nAgasampge huva jANaru biDuvarEne
jANatanada mAtu ADOdu taravalla ENAkSi lAlipudu
1
caraNam 3

hottu hOyitu ranga innArighELali attige maidunaru
matte ninnoDanADuvuda kELdare kuTTi enna kaDevarandaLu
1
caraNam 4

duNDu mallige huva kaNDare biDuvare puNDarIkAkSi kELu
daNDisadiru enna adalisalu bEDa kaNDanoDane nuDidu
1
caraNam 5

Etakinitu chala ennoLagI pari mAtuLAntaka krSNayya
mAtu mAtike pariyidu taravalla biddare aridavana
1
caraNam 6

kaNNili kaNDa mElida biDuvavaruNTe eNNisa bEDa nInu
beNNe kaLLanu krSNa kaNNa sanneya mADi heNNa mOhisudiddanu
1
caraNam 7

appa seraga biDo aNNa seraga biDo appayya biDu seraga
appanu nAnalla aNNanu nAnalla ninnappana aLiya kANe
1
caraNam 8

mAva seraga biDo bhAva seraga biDo mAvayya biDu seraga
mAvanu nAnalla bhAvanu nAnalla ninna mAvana maganu kANe
1
caraNam 9

aNNa seraga biDo tamma seraga biDo aNNayya biDu seraga
aNNanu nAnalla tammanu nAnalla ninaNNana bhAva kANe
20: kanda seraga biDo tande seraga biDo kandayya biDu seraga
kandanu nAnalla tandeyu nAnalla ninna kandana tande kANe
21: netti mElina koDa etti nIDADalu appi kombaLe krSNana
bhaktara salahuva purandara viTTalana cikka vEnkaTarAyana
***

ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪ

ಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1

ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2

ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3

ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4

ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5

ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6

ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7

ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8

ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9

ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
*******