..
kruti by ಭೀಮಾಶಂಕರರು ದಾಸರು bheemashankara
ಜಯ ಮಂಗಳಂ ನಿತ್ಯ ಶುಭ ಮಂಗಳಂ | ದಯಾಂಬುಧಿ ಶ್ರೀ ಮಹಾ ಪಾದ ತೀರ್ಥಕ್ಕೆ ಪ
ಅಜ್ಞಾನ ಮಲನಾಶ ಮಾಡುವ ತೀರ್ಥಕ್ಕೆ | ಜನ್ಮ ಕರ್ಮಗಳ ಪರಿಹರಿಸುವ ತೀರ್ಥಕ್ಕೆ | ಜ್ಞಾನ ವೈರಾಗ್ಯವನು ಸಿದ್ಧಿಸುವ ತೀರ್ಥಕ್ಕೆ |ಘನ ಗುರುವಿನ ನಿಜ ಪಾದ ತೀರ್ಥಕ್ಕೆ || ಜಯ || 1
ತಾಪತ್ರಯವನು ಪರಿಹರಿಸುವ ತೀರ್ಥಕ್ಕೆ | ಅಪರಿಮಿತವಾದ ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2
ವಿಪ್ರಪಾದಾದಲ್ಲಿ ದಕ್ಷಿಣಾ ಭಾಗದಲಿ | ತಪ್ಪದೆ ವಾಸವಾಗಿಹ ತೀರ್ಥಕ್ಕೆ |ಒಪ್ಪುತೆ ಶಿರಸ್ಸಿನೊಳು ಧರಿಸಿಕೊಂಡಿಹ ಹರನ | ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3
ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4
ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5
***