Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀರಾಮಚಂದ್ರಾಂಘ್ರಿ pranesha vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀರಾಮಚಂದ್ರಾಂಘ್ರಿ pranesha vittala. Show all posts

Monday, 6 September 2021

ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀರಾಮಚಂದ್ರಾಂಘ್ರಿ ankita pranesha vittala

 ರಾಗ: ಭೈರವಿ ತಾಳ: ಝಂಪೆ

ಜಯ ಮಂಗಳಂ ನಿತ್ಯ ಶುಭಮಂಗಳಂ


ಶ್ರೀರಾಮಚಂದ್ರಾಂಘ್ರಿ ಸರಸೀರುಹಭೃಂಗನಿಗೆ

ಧೀರ ಸುಧೀಂದ್ರಕರಸಂಭೂತಗೆ

ವಾರಾಹಿತೀರ ಮಂತ್ರಾಲಯನಿಕೇತನಿಗೆ

ಶ್ರೀ ರಾಘವೇಂದ್ರರಾಯರ ಚರಣಕೆ 1

ಪರಮತಧ್ವಾಂತ ಭಾಸ್ಕರಗೆ ಸ್ವರ್ಣಾಭಗೆ

ಶರಣರಭಿಲಾಷೆ ಪೂರೈಸುವರಿಗೆ

ದರುಶನಾದಿ ತ್ರಿಭಾಷಾದರ್ಥ ಬಲ್ಲವರಿಗೆ

ಮರುತಮತ ಕಡಲುಡುಪತಿಎನಿಪಗೆ 2

ಪ್ರಾಣೇಶವಿಠಲನವರೊಳು ಪ್ರೀತಿಯುಳ್ಳವಗೆ

ಕ್ಷೋಣಿಯೊಳು ಸರಿಯಿಲ್ಲದ ಮಹಿಮನಿಗೆ

ಧ್ಯಾನಕ್ಕೆ ಬಂದೊದಗುತಿಪ್ಪ ಗುರುರಾಯರಿಗೆ

ಮೀನಾಂಕಜಿತಗೆ ದೇಶಿಕವರ್ಯಗೆ 3

****