Showing posts with label ರಾಘವೇಂದ್ರರಾಯಾ ಈ ಭವ ರೋಗ ಕಳೆಯೋ ಜೀಯಾ pandarinatha vittala. Show all posts
Showing posts with label ರಾಘವೇಂದ್ರರಾಯಾ ಈ ಭವ ರೋಗ ಕಳೆಯೋ ಜೀಯಾ pandarinatha vittala. Show all posts

Monday 6 September 2021

ರಾಘವೇಂದ್ರರಾಯಾ ಈ ಭವ ರೋಗ ಕಳೆಯೋ ಜೀಯಾ ankita pandarinatha vittala

  ankita ಪಂಡರೀನಾಥವಿಠಲ

ರಾಗ: ಹಂಸಾನಂದಿ ತಾಳ: [ಆದಿ]


ರಾಘವೇಂದ್ರರಾಯಾ ಈ ಭವ 

ರೋಗ ಕಳೆಯೋ ಜೀಯಾ 


ರಾಘವೇಂದ್ರಗುರು ರಾಯ ನಿಮ್ಮಂಘ್ರಿಯ

ಜಾಗುಮಾಡದಲೆ ಬಾಗಿ ಭಜಿಸುವೆನು  ಅ ಪ


ಮಂತ್ರಾಲಯನಿಲಯಾ ಸಂತತ 

ಚಿಂತಿಸುವೆನು ನಿನ್ನಾ

ಕಂತು ಜನಕ ಶ್ರೀಕಾಂತನ ಪ್ರೀಯನೆ

ಚಿಂತೆ ಹರಿಸೊ ಬಹು ಭಕ್ತಿಲಿ ಬೇಡುವೆ  1

ಶ್ರೀ ಸುಧೀಂದ್ರಕರಜಾ ಗುರುವರ 

ಸೂಸಿ ಭಜಿಪೆ ನಿನ್ನಾ

ದೋಷರಹಿತ ಶ್ರೀನಿಲಯನ ದಾಸನೆ

ದೋಷಿಯು ನಾ ನಿಜ ದೂಷಿಸದಿರೊ ಶ್ರೀ  2

ನಿಜ ಕರುಣಿಯು ನೀನೆ ಈ ಭುವಿ 

ಸುಜನರ ಪೊರೆಯುವನೇ

ನಿಜವಾಗಿಯು ನಂಬಿಹೆ ಪದರಜಗಳ

ಗಜವರದನ ದಾಸನೆ ತ್ವರ ಕರುಣಿಸೋ   3

ಹ್ಯಾಗೆ ಸ್ತುತಿಸಲಯ್ಯಾ ನಿನ್ನನು 

ರಾಘವೇಂದ್ರರಾಯಾ

ನಾಗಶಯನ ಹರಿ ಭಕ್ತಾಗ್ರೇಸರ

ಕೂಗಿ ಕರೆಯುವೆನು ಸ್ತುತಿಸಲು ತಿಳಿಯೆನು 4

ಮಂಗಳ ಮೂರುತಿಯೇ ಶ್ರೀನರ- 

ಸಿಂಗನ ಕಂಡವನೇ

ಭಂಗಿಸೋ ಭವಭಂಗಗಳೆಲ್ಲವ ಬೇಗ

ರಂಗ ಪಂಢರಿನಾಥವಿಠಲನ ದಾಸಾ   5

***