Showing posts with label ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ vijaya vittala. Show all posts
Showing posts with label ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ vijaya vittala. Show all posts

Thursday, 17 October 2019

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ ankita vijaya vittala

ವಿಜಯದಾಸ
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ |
ಸಾರು ನೀನು ಎನಗೆ ಸುಮ್ಮನ್ಯಾತಕೆ ಯಿದ್ದೀ ಪ

ನೀರೊಳು ಮುಣಗೆ ವೇದವ ತಂದಾತನೊ |
ಭಾರವನು ಪೊತ್ತು ಸುರರ ಕಾಯಿದಾತನೊ |
ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ |
ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1

ಗಗನಕೆ ಬೆಳದು ಸುರ ನದಿಯ ಪಡೆದಾತನೊ |
ಹಗೆಗಳ ಕೊಂದು ಹರುಷಿತನಾದನೊ |
ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ |
ಮಗನಮಗನ ತಂದ ಮಹಿಮನೊ 2

ಹರಗೆ ಸಾಯಕವಾಗಿ ಪುರ ಉರಹಿದಾತನೊ |
ದುರುಳರನ ಕೊಂದ ದುರ್ಲಭದೇವನೊ |
ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ -
ಶರಣರಿಗೊಲಿದು ಬಂದ ಸರ್ವೋತ್ತಮನೊ 3
*********