ಕಾಯಯ್ಯ ರಘುರಾಮ ದೀನಜನೋದ್ದಾರಿ ರಘುರಾಮ ಪ
ಕೈವಲ್ಯಾವನ ಮೂರುತಿ ನೀನು ಕೇವಲ ಘನ ಅಪರಾಧಿಯುನಾನು ದೇವನೆ ಕರುಣಾಸಾಗರ ನೀನು 1
ಭಾವ ಭಕುತಿಕೀಲವ ನಾನರಿಯೆ ವಿವೇಕಾಮೃತ ನೀಡುವ ದೊರೆಯೆ ಅವಾಗ ವಿಷಯಾಸಕ್ತನು ಹರಿಯೆ ಕಾವ ದೈವ ನೀನೆ ಶ್ರೀ ಹರಿಯೆ 2
ಚರಣವೆ ಗತಿಯೆಂದಾತನ ತಂದೆ ತರಳನ ಕುಂದನಾರಿಸದಿರು ತಂದೆ ತರಳ ಮಹಿಪತಿ ಪ್ರಭು ನಮೋ ಎಂದೆ ಶರಣ ರಕ್ಷಕ ನೀನಿಹುದೆಂದೆ3
***