Showing posts with label ಪಾಂಡುನಂದನರಂತೆ ತೋರುತಿಹರು shyamasundara satyadhyana teertha stutih. Show all posts
Showing posts with label ಪಾಂಡುನಂದನರಂತೆ ತೋರುತಿಹರು shyamasundara satyadhyana teertha stutih. Show all posts

Friday, 27 December 2019

ಪಾಂಡುನಂದನರಂತೆ ತೋರುತಿಹರು ankita shyamasundara satyadhyana teertha stutih

ಪಾಂಡುನಂದನರಂತೆ ತೋರುತಿಹರು
ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು ಪ

ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ
ದ್ವಿಜರಾಜ ಸತ್ಕುಲದಿ ಸುಜನ ಗಣದಿ |
ಕುಜನ ಗರ್ವವ ನೀಗಿ ವೃಜಿನ ವರ್ಜಿತರಾಗಿ
ಗಜವರದನಂಘ್ರಿಯುಗ ಭಜನ ತತ್ಪರರಾಗಿ 1

ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ
ವರ ಸುಗೀತಾರ್ಥ ತತ್ವಜ್ಞರಾಗಿ
ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ
ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ 2

ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ
ವಸುಧಿ ಸುರರಿಗೆ ಸನ್ಮೋದಗೊಳಿಸಿ
ವಸುದೇವಸುತ ಶಾಮಸುಂದರನ ವಶಗೊಳಿಸಿ
ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ 3
*********