ಶ್ರೀ ಭಾವೀರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರು ..
ಪಂಕಜಾಕ್ಷಿ ಕೇಳಿದ್ಯಾ
ಪಂಕಜಗಂಧಿ ।
ವೆಂಕಟರಾಮಾರ್ಯರ
ಮಹಾ ಮಹಿಮೆಯು ।। ಪಲ್ಲವಿ ।\
ಅಪಮೃತ್ಯು ಅಪರಿಮಿತದ
ಪಾಪಗಳೆಲ್ಲ ।
ಅಪರೋಕ್ಷ ಜ್ಞಾನಿಯು ಕೃಪೆ
ಮಾಡೆ ಪೋಪಾವು ।। ಚರಣ ।।
ಇವರ ಬಿಟ್ಟವ ಕೆಟ್ಟ
ಇವರಲ್ಲಿದ್ದವ ಗೆದ್ದಾ ।
ಇವರ ಕರುಣಕೆ ಪಾತ್ರನೇ
ಮಹಾಪಾತ್ರನು ।। ಚರಣ ।।
ಆಧಿವ್ಯಾಧಿ ಸರ್ವಬಾಧೆ
ಭಯಂಗಳು ।
ಮೋದಿ ಕೃಷ್ಣನ ವಾರ್ತಿ
ಬೋಧಿಸೆ ದಹಿಪಾವು ।। ಚರಣ ।।
ಮನಕನುಭವ ಅನುಪಮ
ಮಹಾ ಮಹಿಮರ ।
ಮನಕೆ ಬಂದವನ
ಸುಮನಸನೆಂದೆನಿಸುವ ।। ಚರಣ ।।
ಪರಮಾತ್ಮ ತಾನೇ
ಪ್ರತ್ಯಕ್ಷ ಮಾತಾಡದೆ ।
ನಿರುತದಿ ಇವರಲ್ಲಿ ನಿಂತು
ಮಾತಾಡುವ ।। ಚರಣ ।।
ಚಿಂತಿಸುತಿಪ್ಪಾರ
ಚಿಂತಿತಾರ್ಥಗಳೆಲ್ಲ ।
ಚಿಂತಾಮಣಿಯಂತೆ
ಸಂತೈಸುತ್ತಿದ್ದಾರೆ ।। ಚರಣ ।।
ವರದ ಗೋಪಾಲವಿಠಲ
ಇವರಲಿ ನಿಂತು ।
ವರವ ಕೊಡುವೆನೆಂದು
ಕರೆವುತಲಿ ಇದ್ದಾನೆ ।। ಚರಣ ।।
***