Showing posts with label ನೋಡಲೇ ಮನವೇ ಕೊಂಡಾಡು ಗುರುಗಳ ಪಾದ gurushreesha vittala. Show all posts
Showing posts with label ನೋಡಲೇ ಮನವೇ ಕೊಂಡಾಡು ಗುರುಗಳ ಪಾದ gurushreesha vittala. Show all posts

Saturday, 1 May 2021

ನೋಡಲೇ ಮನವೇ ಕೊಂಡಾಡು ಗುರುಗಳ ಪಾದ ankita gurushreesha vittala

 ಶ್ರೀ ರಾಯರ ಕಾರುಣ್ಯವನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ. 

ರಾಗ : ಮೋಹನ ತಾಳ : ಝಂಪೆ 


ನೋಡಲೇ ಮನವೇ 

ಕೊಂಡಾಡು ಗುರುಗಳ ಪಾದ ।

ಈಡುಯಿಲ್ಲವೋ ಪುಣ್ಯಕೆ ।। ಪಲ್ಲವಿ ।। 


ನಾಡೊಳಗೆ ಗುರು 

ರಾಘವೇಂದ್ರರಾಯರ ಸೇವೆ ।

ಮಾಡಿದವ ಪರಮ 

ಧನ್ಯ । ಮಾನ್ಯ ।। ಅ. ಪ ।। 


ನಿಷ್ಠೆಯಿಂದಲಿ ಸ್ಮರಿಸೆ 

ಕಷ್ಟಗಳು ದೂರ । ಮನೋ ।

 ಭೀಷ್ಟಗಳ ಪೂರೈಸುವರೋ ।

 ಅಷ್ಟ ಸೌಭಾಗ್ಯವನೆ 

ಕೊಟ್ಟು ಸುಜನರಿಗೆ । ಶ್ರೀ ।

 ವಿಷ್ಣು ದಾಸ್ಯವ 

ತೋರ್ಪರೋ ।।

 ದೃಷ್ಠಿಯಿಂದಲಿ 

ನೋಡಲನೇಕ ಜನ್ಮದ ಪಾಪ ।

ಬಿಟ್ಟು ಪೋಪವೋ ಕ್ಷಣದಲಿ ।

ಎಷ್ಟು ಹೇಳಲಿ ಇವರ 

ನಿಷ್ಠ ಮಹಾತ್ಮ್ಯೇಯನು ।

ದುಷ್ಟರಿಗೆ ದೊರೆಯದಿವರ 

ಸೇವಾ ।। ಚರಣ ।। 


ಹಲವು ಕ್ಷೇತ್ರಗಳೇಕೆ 

ಹಲವು ತೀರ್ಥಗಳೇಕೆ ।

ಫಲ ಸುಲಭದಲ್ಲಿರಲು ।

ಬಲವು ಇದ್ದದ್ದರೊಳು 

ಪ್ರದಕ್ಷಿಣೆ ಸುಪದಜಲ ।

ತಲೆಯಲ್ಲಿ ಧರಿಸಿ ನಿತ್ಯ ।।

ಮಲ ರಹಿತನು ಆಗಿ 

ದಂಡ ಪ್ರಣಾಮವ ಮಾಡೆ ।

ಒಲಿವರು ಕರುಣದಲಿ ಬೇಗ ।

ಜಲಜನಾಭನು ನಾಲ್ಕು 

ರೂಪದಿಂದಿವರಲ್ಲಿ ।

ಸಿಲುಕಿ ಪೂಜೆಗೊಂಬ 

ಸತತಾ । ಮೋಕ್ಷದಾತಾ ।। ಚರಣ ।। 


ಹರಿದಾಸರಿದ್ದ ಸ್ಥಳ ವರ 

ಕಾಶಿ ಮೊದಲಾದ ।

ಕುರುಕ್ಷೇತ್ರಕಿಂತಧಿಕವೋ ।

ಸುರ ಋಷಿ ಮುನಿಗಳು 

ಇಲ್ಲಿಹರು ವೈಕುಂಠ ।

ಸರಿಮಿಗಿಲು ಎಂದೆನಿಪುದೋ ।।

ಪರಮ ಸುಜ್ಞಾನಿಗಳಗೀ 

ಫಲವು ದೊರಕುವುದು ।

ತರತಮದಿ ಇತರ ಜನಕೆ ।

ಗುರು ಶ್ರೀಶವಿಠ್ಠಲನು 

ಇವರ ರೂಪ ನಾಮದಲಿ ।

ಪರಿಪರಿಯ ವರವಗರೆವಾ । 

ಪೊರೆವಾ ।। ಚರಣ ।।

****