Showing posts with label ಮಧುಹರನಿಗರ್ಪಿತವು ಸರ್ವಕರ್ಮ jayesha vittala. Show all posts
Showing posts with label ಮಧುಹರನಿಗರ್ಪಿತವು ಸರ್ವಕರ್ಮ jayesha vittala. Show all posts

Thursday, 5 August 2021

ಮಧುಹರನಿಗರ್ಪಿತವು ಸರ್ವಕರ್ಮ ankita jayesha vittala

 ..

ಮಧುಹರನಿಗರ್ಪಿತವು ಸರ್ವಕರ್ಮ ಪ


ಉದಯಾದಿ ಶಯನಾಂತ ಕೃತ ಕರ್ಮ ಅನುಭವವು ಅ.ಪ


ಸ್ಮøತಿ ವಿಸ್ಮøತಿಯಲ್ಲಿ ಕೃತ ಉತ್ತಮಾಧಮ ಕರ್ಮ

ಮತ್ತೆ ಅನುಭವಿಸಿದ ಸುಖ ದುಃಖಗಳಿಗೆ

ಚಿತ್ತ ನಿನ್ನದು ಮೂಲ ಸರ್ವ ಸ್ಥಿತಿಗತಿ ಧರ್ಮ

ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ 1


ನೀನಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು

ಎನ್ನಿಷ್ಟವೆನಲ್ಯಾಕೊ ಪ್ರೇಷ್ಠತಮನೆ

ವಾಣೀಶ ಹರಸುರರು ನಿನ್ನ ಪ್ರೀತಿಗಾಗಿ

ಏನು ಕೊಟ್ಟರು ಮುದದಿ ಉಂಡು ನಿನಗರ್ಪಿಪರೊ 2


ಅಧಿಕಾರಿ ನಾನಲ್ಲದದರಿಂದ ಬೆದರುವೆನು

ಮದನನಯ್ಯನೆ ದಯದಿ ಮನ್ನಿಸೆನ್ನ

ಉದಯಾಸ್ತ ಕೃತಕರ್ಮ ಜಯೇಶವಿಠಲ

ಮುದಖೇದಗಳು ನಿನ್ನ ಪ್ರೀತಿಗೊದಗಲೋ ದೇವ 3

****