Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಉಡುಪಿ ಕ್ಷೇತ್ರ ಮಹಿಮಾ ಸುಳಾದಿ
ರಾಗ ಷಣ್ಮುಖಪ್ರಿಯ
ಧ್ರುವತಾಳ
ಮಧ್ವಮತದ ಭಾಗ್ಯ ಎಂಥಾದೊ ಎಂಥಾದೊ
ದುಗ್ಧಾಬ್ಧಿಯಂತೆ ಪ್ರಕಾಶವಾಗಿ
ದಿಗ್ದೇಶದೊಳು ತುಂಬಿ ಸೂಸುತಲಿದೆ ಇದೇ
ಸಿದ್ಧಾಂತ ಪ್ರಮೇಯವನು ಪ್ರತಿದಿನದಲಿ
ನಿರ್ಧಾರವಾಗಿ ಗುಣಿಸಿ ಪೇಳುವದಕೆ ನಿತ್ಯ
ರುದ್ರಾದಿಗಳಿಗಿದು ಅದ್ಭೂತವೊ
ಭದ್ರಗತಿ ಬೇಕಾದ ಮನುಜ ಇಲ್ಲಿಗೆ ಬಂದು
ಶುದ್ಧಾತ್ಮನಾಗಿ ಒಮ್ಮೆ ಸ್ಮರಿಸಲಾಗೀ
ನಿರ್ದೋಷನಾಗುವನೇನೆಂಬೆನಯ್ಯಾ ಕರು -
ಣಾಬ್ಧಿಯೇ ಕಾಣೊ ನಮ್ಮ ಗುರುರಾಯರು
ಅಬ್ಧಿ ಮೇಖಳದೊಳು ಅಜ್ಞಾನ ವ್ಯಾಪಿಸಿ
ಬದ್ಧ ಭವದೊಳು ನೆಲೆಗಾಣದೇ
ಬಿದ್ದು ಹೊರಳುತಿರೆ ಜೀವೇಶ ಒಂದೆಂದು
ಶ್ರದ್ಧೆಯಿಲ್ಲದೆ ಸುಜನ ಬಳಲುತಿರಲು
ಉದ್ಧರಿಸುವೆನೆಂದು ಅತಿ ತೀವ್ರದಲಿ ಅ -
ವಿದ್ಯಾ ಕಾಮಕರ್ಮ ತತಿಗಳನು
ಒದ್ದು ಕಡಿಗೆ ನೂಕಿ ಭೇದಾರ್ಥಮಾರ್ಗ ತೋರಿ
ಸದ್ವೈಷ್ಣವರಾಗಿ ಮಾಡಿ ನಗುತ್ತಾ ತಪ್ತಾ -
ಮುದ್ರೆಯನಿತ್ತು ಮೋದದಿಂದಲಿ ಪರಮ ಮುಖ್ಯ
ವಿದ್ಯಾ ರಚಿಸಿ ವಿಶೇಷ ಮಾರ್ಗದ
ಪದ್ಧತಿಯನ್ನು ತೋರಿ ಪರಿ ಪರಿ ಮತವೆಂಬೊ
ದಿಗ್ದಂತಿಗಳಿಗೆ ಅಂಕುಶವೆನಿಪ
ಮಧ್ವರಾಯರ ಮತದ ಭಾಗ್ಯವೆ ಸೌಭಾಗ್ಯ
ಇದ್ದಲ್ಲಿ ಸುಧಾವರ್ಷಗರೆವುತಿದಕೋ
ಖದ್ಯೋತ ಉದಿಸಲು ಸರ್ವಜಾತಿಗೆ ನೋಡು
ಉದ್ದಿನಷ್ಟು ಖೇದ ಪುಟ್ಟದು ಕಾಣೋ
ಬುದ್ಧಿವಂತರಾಗಿ ತಮ ತಮ್ಮ ಸಾಧನ
ಇದ್ದದ್ದೆ ಮಾಡಿಕೊಂಡು ಸುಖಿಸುವರು
ಈ ಧರೆಯೊಳು ಕೇಳು ತನ್ನಿಂದ ಉಪಕಾರ
ಪದ್ಮಬಾಂಧವನಿಗೆ ಅಣುಮಾತ್ರವು ಇಲ್ಲ
ತದ್ವೇಷವನ್ನೆ ಮಾಡಿ ಅಪಕಾರದಿಂದ ರವಿಗೆ
ಬದ್ಧಗೈಸುವ ಶಕ್ತಿ ಮೊದಲೇ ಇಲ್ಲ
ಪೊದ್ದಿಕೊಂಡು ಬಂದು ಹೊದರಿನೊಳಗೆ ಅಡ -
ಗಿದ್ದಾಗಿ ತರುವಾಯಾ ಇದೆ ನಾಮದ
ಇದ್ದ ಶಕುನಿ ವ್ಯರ್ಥ ದೂಷಿಸಲೇನಹುದೊ
ಹೃದರೋಗವಲ್ಲದೆ ಅದರಂತೆವೋ
ಮಧ್ವರಾಯರ ಮತದ ಭಾಗ್ಯವೆ ಸೌಭಾಗ್ಯ
ನಿದ್ರೆಯೊಳಗಾದರು ಎಚ್ಚತ್ತು ನೋಡಿದರು
ಉದ್ರೇಕ ಆನಂದ ಮುಂದೆ ವರ್ಣಿಸಲರಿಯೇ
ಶಬ್ದಮಾತುರ ಕೇಳಿ ಬರಲು ಈ ಪರಿ ಸಾ -
ನಿಧ್ಯವಾಗಿದ್ದ ಜನರ ಪುಣ್ಯವೆಂತೊ
ಮಧ್ವವಲ್ಲಭ ನಮ್ಮ ವಿಜಯವಿಠ್ಠಲ ನಿಲ್ಲಿ
ಇದ್ದ ಸೊಬಗು ನೋಡು ಆನಂದತೀರ್ಥರಿಂದ ॥ 1 ॥
ಮಟ್ಟತಾಳ
ತತ್ವವಿಚಾರವನು ತಿಳಿದ ಮನುಜ ಮನುಜಾ
ಉತ್ತುಮ ಉತ್ತುಮನು ಆವಾವ ಜನುಮಕ್ಕೆ
ವೃತ್ತಿರೂಪದಲ್ಲಾದರೂ ಜೀವನ್ಮುಕ್ತನು
ನಿತ್ಯನಿತ್ಯವನು ಧ್ಯಾನವ ಮಾಡುವನು
ತತ್ತಳಿಸುವ ಮಧ್ವಮತವ ಪೊಂದಿದನು
ಮೃತ್ಯುವಿಗಂಜ ಕಾಲಗೆ ಭಯಪಡನು
ಮರ್ತ್ಯಲೋಕದಲ್ಲಿ ಅವನೇ ಸಿದ್ಧಪುರುಷ
ಎತ್ತಲಾದರು ಅವನು ಇದ್ದ ದಿಕ್ಕಿಗೆ ಹಸ್ತಾ -
ವೆತ್ತಿ ಮುಗಿದು ಮಹಾ ಧನ್ಯನಾಗಲಿಬೇಕು
ಇತ್ತ ಕೇಳು ಮನವೆ ಶ್ರುತಿ ಪುಶಿಯೆಂಬುವನ
ಉತ್ತರ ನಿಜವೇನೊ ಗರ್ತಿಮಗನೊ ಎಂದರೆ ವಾದಿಸುವನ ಕೂಡ
ಹೊತ್ತು ಹೊತ್ತಿಗೆ ಬಡದಾಡಿದರೇನುಂಟೋ
ಕೀರ್ತಿಪುರುಷ ನಮ್ಮ ವಿಜಯವಿಠ್ಠಲರೇಯನ
ಚಿತ್ತದಲ್ಲಿ ಇಟ್ಟ ಮಧ್ವರಾಯರೆ ಗುರುಗಳೆನ್ನಿ ॥ 2 ॥
ತ್ರಿವಿಡಿತಾಳ
ಎಂಥಾ ಕರುಣಾಳೋ ಸರ್ವಜ್ಞರಾಯರು
ಚಿಂತಾಮಣಿಯೆ ಕಾಣೊ ಚಿರಕಾಲ ನಮಗೆಲ್ಲ
ಶಾಂತರಾಗಿ ಲೋಕಮಲಿನ ದರ್ಪಣದಂತೆ
ಭ್ರಾಂತಿಯಲ್ಲಿ ನಿತ್ಯ ಮುಳುಗಿರಲು
ಮಂತ್ರೋಪದೇಶಿಸಿ ಅಮೃತಗರೆವ ಮಹಾ
ಗ್ರಂಥಗಳ ಮಾಡಿ ಮಂದಜನಕೆ
ಕಿಂಚಿತು ಪೋಗಾಡಿಸಿ ಅನಾದಿಯಿಂದ ಬಂದಾ
ಗ್ರಂಥಿಯನು ಬಿಡಿಸಿ ತತ್ವಾನುಸಾರ
ಎಂತೆಂತು ಮನಸೀಗೆ ಸೌಕರಿಯವಾಗುವಾ
ಪಂಥ ತೋರಿದರಯ್ಯಾ ಭೇದಾರ್ಥದಿ
ಪಿಂತೆ ಮುಂತೀಗ ನೂರಾರು ಕೋಟಿ ಕುಲಕೆ
ಅಂತಕನ ಬಾಧೆಯಿಲ್ಲದಂತೇವೆ
ಸಂತೋಷವಿತ್ತು ಎಂದಿಗೇ ಪ್ರತಿಕೂಲಾದ
ಕಾಂತಾರ ಕಡಿವ ಕುಠಾರ ಕಾಣೊ
ಇಂತು ಸಜ್ಜನರನ್ನು ಪಾಲಿಸಿ ಅತಿ ತೀವ್ರ
ಸಂತರಿಗೆ ನವವಿಧ ಭಕ್ತಿ ಪುಟ್ಟು -
ವಂತೆ ಕೇವಲ ಸಾಧನಕೆ ದ್ವಾರಕಿಯಲ್ಲಿ
ನಿಂತಿದ್ದ ನಿಗಮಗೋಚರ ರುಕ್ಮಿಣಿ -
ಕಾಂತನ ವಿಗ್ರಹ ನಿಲ್ಲಿಸಿ ಲಕ್ಷಣದಿಂದ
ತಂತ್ರಸಾರೋಕ್ತದಿ ಪೂಜೆ ಮಾಡಿದರು
ಎಂಥ ಗುರುಗಳೋ ಮಧ್ವಮುನಿರಾಯರು
ಅಂತುಗಾಣೆನು ನಾನು ರಜತಪೀಠದ ಮಹಿಮೆ
ಎಂತೆಂತು ಪೊಗಳಿದರೆ ಪೊಸ ಬಗೆಯೂ
ಕಂತುಪಿತನು ಇಲ್ಲಿ ನೆಲೆಯಾದ ನಾನಾ
ವೃತ್ತಾಂತ ಸ್ಕಂದನಿಗೆ ಶಿವನು ಪೇಳಿಪ್ಪನೋ
ದಂತ ಕಥೆಯಲ್ಲ ಧರಣಿಯೊಳಗೆ ಆ -
ದ್ಯಂತ ಕಾಲದಲ್ಲಿದೆ ಸಿದ್ಧವೆನ್ನಿ
ಅಂತರಂಗದ ಸ್ವಾಮಿ ವಿಜಯವಿಠ್ಠಲ ಸ್ವ -
ತಂತ್ರ ಪುರುಷ ಮಧ್ವಮುನಿ ಹೃದಯಮಂದಿರ ॥ 3 ॥
ಅಟ್ಟತಾಳ
ಏನು ಸುಕೃತವೋ ಮತ್ತಾವ ಸಾಧನವೋ
ಆನಂದತೀರ್ಥರ ಕರವಾರಿಜದಿಂದ
ಭಾನುವಿನಂತೆ ಪ್ರಕಾಶಮಯನಾಗಿ
ಈ ನಿಧಿಯಲ್ಲಿ ನಿಲ್ಲಿಸಿದ ಬಾಲರೂಪ
ಮಾನುಷ ವೇಷ ಭಕತರ ಲಾಂಛನ
ಮಾನಸದಲ್ಲಿ ನೋಡಿ ಧನ್ಯನಾದೆನೊ
ಎನ್ನಾ ಏನು ಸುಕೃತವೋ ನಾನು
ನನ್ನ ಗೋತ್ರರ ದೇಹ ಈ ಜನ್ಮ
ನಾನಾ ಪ್ರಕಾರದಿ ಮಾಡಿದ ಕರ್ಮವು
ಅನಂತ ಯೋನಿಯಲ್ಲಿ ಬಂದು ಮಾಡಿದ ಬಗೆ
ಕಾನನ ಗಿರಿಗ್ರಾಮ ಕ್ಷೇತ್ರ ಸರೋವರ
ಧನಭವನ ಮೃಗ ಪಕ್ಷಿ ವಾರಿಚರ
ಮಾನವ ತರುಜಾತಿ ನಾಮದಲ್ಲಿಪ್ಪವು
ಏನೆಂಬಿ ಎಲ್ಲೆಲ್ಲಿ ಇದ್ದ ವಸ್ತುಗಳೆಲ್ಲಾ
ಭಾನುಪ್ರಕಾಶದ ಪರಿಯಂತ ಚನ್ನಾಗಿ
ಆನೇನಾದದು ನೋಡಿ ಹೇಳಿ ಕೇಳಿ ಆ -
ಘ್ರಾಣಿಸಿ ಮೆದ್ದದ್ದು ಇದರ ವಿಸ್ತರವೆಲ್ಲಾ
ಪುನೀತವಾಗಲಿ ನಿರಂತರ ಬಿಡದಲೆ
ಆನಂದತೀರ್ಥರ ಕರುಣಕೆ ಎಣಿಯೆ
ಜ್ಞಾನ ಪರಿಪೂರ್ಣ ವಿಜಯವಿಠ್ಠಲರೇಯ
ಧ್ಯಾನ ಮಾಡುವ ಜನಕೆ ಅತಿ ಸುಲಭ ಸಾಧ್ಯ ॥ 4 ॥
ಆದಿತಾಳ
ಶ್ರೀಮದುಡುಪಿನ ಯಾತ್ರಿಯೇ ಯಾತ್ರಿ
ಶ್ರೀಮದಾನಂದತೀರ್ಥ ಗುರುಗಳೆ ಗುರುಗಳು
ಭೂಮಿಯೊಳಗೆ ಇದಕ್ಕೆ ಸಮ ಆಧಿಕ್ಯ ಕಾಣೆ
ರೋಮಾರೋಮಾದಲ್ಲಿ ಪುಣ್ಯ ತುಂಬಿ ತುಳುಕುವದು
ಶ್ರೀಮದ್ವೈಷ್ಣವ ಜನುಮವೆ ಜನ್ಮವೆನ್ನಿ
ಶ್ರೀಮದ್ಭಾಗವತ ಶ್ರವಣವೆ ಶ್ರವಣವೆನ್ನಿ
ಶ್ರೀಮದ್ವಿಷ್ಣು ಭಕ್ತಿ ಇದೆ ಮಹ ಭಕ್ತಿಯೆನ್ನಿ
ಯಾಮ ಯಾಮಕೆ ಸ್ಮರಿಸೆ ಸಕಲ ಸಂಪದವಕ್ಕು
ಈ ಮನೋ ಉತ್ಸಾಹ ಇಲ್ಲೆ ಪುಟ್ಟಿದೆ
ಯೋಮ ಗಂಗಾದಿ ಕ್ಷೇತ್ರ ನೋಡಲು ಆಗದಿದಕೋ
ತಾಮರಸ ಪೀಠನ್ನ ಲೋಕಕ್ಕೆ ಸಮ ವಿಬುಧ
ಸ್ತೋಮ ಕೊಂಡಾಡಿದೆ ಸರ್ವಾಗಮದಿಂದ
ತಮಬುದ್ಧಿ ನಾಶವಹುದು ಚರಮಯಾತ್ರಿ ಇದೆ
ಶಮ ದಮ ಗುಣದಲ್ಲಿ ಮುಕ್ತರೊಳಗಿಪ್ಪ
ರಮೆ ಮನೋಹರ ನಮ್ಮ ವಿಜಯವಿಠ್ಠಲರೇಯಾ
ನೇಮ ನಿತ್ಯದಲ್ಲಿ ಮನಸು ಕೊಡುವನು ನಿತ್ಯದಲ್ಲಿ ॥ 5 ॥
ಜತೆ
ಮಧ್ವರಾಯರ ಕರುಣ ಪಡೆದು ಪಾವನರಾಗಿ
ಸಿದ್ಧನಾಗುವದು ವಿಜಯವಿಠ್ಠಲನ ಪೊಂದಿ ॥
*********
by vijaya dasa
ಶ್ರೀಮನ್ ಮಧ್ವಮತ ಮಹಿಮಾ ಸುಳಾದಿ (ಶ್ರೀ ವಿಜಯದಾಸರು)
ಆದಿತಾಳ –
ಮಧ್ವಮತದ ಭಾಗ್ಯ ಎಂಥದೊ ಎಂಥದೊ
ದುಗ್ಧಾಬ್ಧಿಯಂತೆ ಪ್ರಕಾಶವಾಗಿ
ದಿಗ್ದೇಶದೊಳು ತುಂಬಿ ಸೂಸುತಲಿದೆ ಇದೇ
ಬದ್ಧಗೈಸುವ ಶಕ್ತಿ ಮೊದಲೇ ಇಲ್ಲ
ಪೊದ್ದಿಕೊಂಡು ಬಂದು ಹೊದರಿನೊಳಗೆ ಅಡ
ಗಿದ್ದಾಗಿ ತರುವಾಯಾ ಇದೆ ನಾಮದ
ಇದ್ದ ಶಕುನಿ ವ್ಯರ್ಥ ದೂಷಿಸಲೇನಹುದೊ
ಹೃದರೋಗವಲ್ಲದೆ ಅದರಂತೆವೋ
ಮಧ್ವರಾಯರ ಮತದ ಭಾಗ್ಯವೇ ಸೌಭಾಗ್ಯ
ನಿದ್ರೆಯೊಳಗಾದರು ಎಚ್ಚೆತ್ತು ನೋಡಿದರು
ಉದ್ರೇಕ ಆನಂದ ಮುಂದೆ ವರ್ಣಿಸಲರಿಯೇ
ಶುದ್ಧಾತುಮರ ಕೇಳಿ ಬಲ್ಲರು ಈ ಪರಿ ಸಾ
ನಿಧ್ಯವಾಗಿದ್ದ ಜನರ ಪುಣ್ಯವೆಂತೊ
ಮಧ್ವವಲ್ಲಭ ನಮ್ಮ ವಿಜಯವಿಠಲನಲ್ಲಿ
ಇದ್ದ ಸೊಬಗುನೋಡಿ ಆನಂದತೀರ್ಥರಿಂದ || ೧ ||
ಮಟ್ಟತಾಳ –
ತತ್ವವಿಚಾರವನು ತಿಳಿದ ಮನುಜ ಮನುಜಾ
ಉತ್ತುಮ ಉತ್ತುಮನು ಆವಾವ ಜನುಮಕ್ಕೆ
ವೃತ್ತಿರೂಪದಲ್ಲಾದರು ಜೀವನ್ಮುಕ್ತನು
ನಿತ್ಯನಿತ್ಯವನು ಧ್ಯಾನಮಾಡುವನು
ತತ್ತಳಿಸುವ ಮಧ್ವಮತವ ಪೊಂದಿದನು
ಮೃತ್ಯುವಿಗಂಜಿ ಕಾಲಗೆ ಭಯಪಡನು
ಮರ್ತ್ಯಲೋಕದಲ್ಲಿ ಅವನೇ ಸಿದ್ಧಪುರುಷ
ಎತ್ತಲಾದರು ಅವನು ಇದ್ದದಿಕ್ಕಿಗೆ ಹಸ್ತಾ
ವೆತ್ತಿ ಮುಗಿದು ಮಹಾಧನ್ಯನಾಗಲಿಬೇಕು
ಇತ್ತಕೇಳು ಮನವೆ ಶ್ರುತಿ ಪುಶಿಯೆಂಬವನ
ಉತ್ತರ ನಿಜವೇನೊ ಗರ್ತಿ ಮಗನೊ ಎಂದರೆ ವಾದಿಸುವನ ಕೂಡ
ಹೊತ್ತುಹೊತ್ತಿಗೆ ಬಡಿದಾಡಿದರೇನುಂಟೋ
ಕೀರ್ತಿಪುರುಷ ನಮ್ಮ ವಿಜಯವಿಠಲರೇಯನ್ನ
ಚಿತ್ತದಲ್ಲಿ ಇಟ್ಟ ಮಧ್ವರಾಯರೆ ಗುರುಗಳೆನ್ನಿ || ೩ ||
ತ್ರಿವಿಡಿತಾಳ –
ಎಂಥಾ ಕರುಣಾಳೋ ಸರ್ವಜ್ಞರಾಯರು
ಚಿಂತಾಮಣಿಯ ಕಾಣೊ ಚಿರಕಾಲ ನಮಗೆಲ್ಲ
ಶಾಂತರಾಗಿ ಲೋಕಮಲಿನ ದರ್ಪಣದಂತೆ
ಭ್ರಾಂತಿಯಲ್ಲಿ ನಿತ್ಯ ಮುಳುಗಿರಲು
ಮಂತ್ರೋಪದೇಶಿಸಿ ಅಮೃತಗರೆವ ಮಹಾ
ಗ್ರಂಥಗಳ ಮಾಡಿ ಮಂದಜನಕೆ
ಚಿಂತೆ ಪೋಗಾಡಿಸಿ ಅನಾದಿಯಿಂದ ಬಂದಾ
ಗ್ರಂಥಿಯನು ಬಿಡಿಸಿ ತತ್ವಾನುಸಾರ
ಎಂತೆಂತು ಮನಸೀಗೆ ಸೌಕರಿಯವಾಗುವಾ
ಪಂಥ ತೋರಿದರಯ್ಯಾ ಬೇದಾರ್ಥದಿ
ಪಿಂತೆ ಮುಂತೀಗ ನೂರಾರು ಕೋಟಿ ಕುಲಕೆ
ಅಂತಕನ ಬಾಧೆಯಿಲ್ಲದಂತೆ ವೆ
ಸಂತೋಷವಿತ್ತು ಎಂದಿಗೇ ಪ್ರತಿಕೂಲಾದ
ಕಾಂತಾರಕಡಿವ ಕುಠಾರ ಕಾಣೊ
ಇಂತು ಸಜ್ಜನರನ್ನು ಪಾಲಿಸಿ ಇತಿ ತೀವ್ರ
ಸಂತರಿಗೆ ನವವಿಧ ಭಕ್ತಿ ಪುಟ್ಟು
ವಂತೆ ಕೇವಲ ಸಾಧನಕೆ ದ್ವಾರಕಿಯಲ್ಲಿ
ನಿಂತಿದ್ದ ನಿಗಮಗೋಚರ ರುಕ್ಮಿಣಿ
ಕಾಂತನ ವಿಗ್ರಹ ನಿಲ್ಲಿಸಿದ ಲಕ್ಷಣದಿಂದ
ತಂತ್ರ ಸಾರೋಕ್ತದಿ ಪೂಜೆ ಮಾಡಿದರು
ಎಂಥ ಗುರುಗಳೋ ಮಧ್ವಮುನಿರಾಯರು
ಅಂತಗಾಣೆನು ನಾನು ರಜತ ಪೀಠದ ಮಹಿಮೆ
ಎಂತೆಂತು ಪೊಗಳಿದರೆ ಪೊಸ ಬಗೆಯೂ
ಕಂತು ಪಿತನು ಇಲ್ಲಿ ನೆಲೆಯಾದ ನಾನಾ
ವೃತ್ತಾಂತ ಸ್ಕಂದನಿಗೆ ಶಿವನು ಪೇಳಿಪ್ಪನೋ
ದಂತ ಕಥೆಯಲ್ಲ ಧರಣಿಯೊಳಗೆ ಆ
ದ್ಯಂತ ಕಾಲದಲ್ಲಿದೆ ಸಿದ್ಧವೆನ್ನಿ
ಅಂತರಂಗದ ಸ್ವಾಮಿ ವಿಜಯವಿಠಲ ಸ್ವ
ತಂತ್ರ ಪುರುಷ ಮಧ್ವಮುನಿ ಹೃದಯಮಂದಿರ || ೩ ||
ಅಟ್ಟತಾಳ –
ಏನು ಸುಕೃತವೋ ಮತ್ತಾವ ಸಾಧನವೋ
ಆನಂದತೀರ್ಥರ ಕರವಾರಿಜದಿಂದ
ಭಾನುವಿನಂತೆ ಪ್ರಕಾಶಮಯನಾಗಿ
ಈ ನಿಧಿಯಲ್ಲಿ ನಿಲ್ಲಿಸಿದ ಬಾಲರೂಪ
ಮಾನುಷ ವೇಷ ಭಕುತರ ಲಾಂಛನ
ಮಾನಸದಲ್ಲಿ ನೋಡಿ ಧನ್ಯನಾದೆನೊ
ಎನ್ನಾಏನು ಸುಕೃತವೋ ನಾನು
ನನ್ನ ಗೋತ್ರರ ದೇಹ ಈ ಜನ್ಮ
ನಾನಾ ಪ್ರಕಾರದಿ ಮಾಡಿದ ಕರ್ಮವು
ಅನಂತ ಯೋನಿಯಲ್ಲಿ ಬಂದು ಮಾಡಿದ ಬಗೆ
ಕಾನನ ಗಿರಿಗ್ರಾಮ ಕ್ಷೇತ್ರ ಸರೋವರ
ಧನಭವನ ಮೃಗ ಪಕ್ಷಿವಾರಿಚರ
ಮಾನವ ಚತುಜಾತಿ ನಾಮದಲ್ಲಿಪ್ಪವು
ಏನೆಂಬೆ ಎಲ್ಲೆಲ್ಲಿ ಇದ್ದ ವಸ್ತುಗಳೆಲ್ಲಾ
ಭಾನುಪ್ರಕಾಶದ ಪರಿಯಂತ ಚನ್ನಾಗಿ
ಆನೇನಾದದು ನೋಡಿ ಹೇಳಿ ಕೇಳಿ ಆ
ಘ್ರಾಣಿಸಿ ಮೆದ್ದದ್ದು ಇದರ ವಿಸ್ತಾರವೆಲ್ಲಾ
ಪುನೀತವಾಗಲಿ ನಿರಂತರ ಬಿಡದರೆ
ಆನಂದತೀರ್ಥರ ಕರುಣಕೆ ಎಣಿಯೆ
ಜ್ಞಾನ ಪರಿಪೂರ್ಣ ವಿಜಯವಿಠಲರೇಯ
ಧ್ಯಾನ ಮಾಡುವ ಜನಕೆ ಅತಿ ಸುಲಭ ಸಾಧ್ಯ || ೪ ||
ಆದಿತಾಳ –
ಶ್ರೀಮದುಡುಪಿನ ಯಾತ್ರಿಯೆ ಯಾತ್ರಿ
ಶ್ರೀಮದಾನಂದ ತೀರ್ಥ ಗುರುಗಳೆ ಗುರುಗಳು
ಸಿದ್ಧಾಂತ ಪ್ರಮೇಯವನು ಪ್ರತಿದಿನದಲಿ
ನಿರ್ಧಾರವಾಗಿ ಗುಣಿಸಿ ಪೇಳುವಿದಕೆ ನಿತ್ಯ
ರುದ್ರಾದಿಗಳಿಗಿದು ಅದ್ಭೂತವೊ
ಭದ್ರಗತಿ ಬೇಕಾದ ಮನುಜ ಇಲ್ಲಿಗೆ ಬಂದು
ಶುದ್ಧಾತ್ಮನಾಗಿ ಒಮ್ಮೆ ಸ್ಮರಿಸಲಾಗೀ
ನಿರ್ದೋಷನಾಗುವನೇ ನೆಂಬೆನಯ್ಯಾ ಕರು
ಣಾಬ್ಧಯೇ ಕಾಣೊ ನಮ್ಮ ಗುರುರಾಯರು
ಅಬ್ಧಿಮೇಖಳದೊಳು ಅಜ್ಞಾನ ವ್ಯಾಪಿಸಿ
ಬದ್ಧಭವದೊಳು ನೆಲೆಗಾಣದೇ
ಬಿದ್ದು ಹೊರಳುತಿರೆ ಜೀವೇಶ ಒಂದೆಂದು
ಶ್ರದ್ಧೆಯಿಲ್ಲದೆ ಸುಜನ ಬಳಲುತಿರಲು
ಉದ್ಧರಿಸುವೆನೆಂದು ಅತಿ ತೀವ್ರದಲಿ ಅ
ವಿದ್ಯಾ ಕಾಮಕರ್ಮ ತತಿಗಳನು
ಒದ್ದು ಕಡಿಗೆ ನೂಕಿ ಭೇದಾರ್ಥಮಾರ್ಗ ತೋರಿ
ಸದ್ವೈಷ್ಣವರಾಗಿ ಮಾಡಿ ನಗುತ್ತಾ ತಪ್ತಾ
ಮುದ್ರೆಯನಿತ್ತು ಮೋದದಿಂದಲಿ ಪರಮ ಮುಖ್ಯ
ವಿದ್ಯರಚಿಸಿ ವಿಶೇಷ ಮಾರ್ಗದ
ಪದ್ಧತಿಯನ್ನು ತೋರಿ ಪರಿ ಪರಿ ಮತವೆಂಬೊ
ದಿಗ್ದಂತಿಗಳಿಗೆ ಅಂಕುಶವೆನಿಪ
ಮಧ್ವರಾಯರ ಮತದ ಭಾಗ್ಯವೆ ಸೌಭಾಗ್ಯ
ಇದ್ದಲ್ಲಿ ಸುಧಾವರ್ಷಗರೆವುತಿದೆಕೋ
ಖದ್ಯೋತ ಉದಿಸಲು ಸರ್ವಜಾತಿಗೆ ನೋಡು
ಉದ್ದಿನಷ್ಟು ಖೇದ ಪುಟ್ಟದು ಕಾಣೋ
ಬುದ್ಧಿವಂತರಾಗಿ ತಮ್ಮ ತಮ್ಮ ಸಾಧನ
ಇದ್ದಲ್ಲೆ ಮಾಡಿ ಸುಖಿಸುವರು
ಈ ಧರೆಯೊಳು ಕೇಳು ನಿನ್ನಿಂದ ಉಪಕಾರ
ಪದ್ಮ ಬಾಂಧವನಿಗೆ ಅಣುಮಾತ್ರವು ಇಲ್ಲ
ತದ್ವೇಷವನ್ನೆ ಮಾಡಿ ಅಪಕಾರದಿಂದ ರವಿಗೆ
ಭೂಮಿಯೊಳಗೆ ಇದಕ್ಕೆ ಸಮಾ ಆಧಿಕ್ಯಕಾಣೆ
ರೋಮಾರೋಮಾದಲ್ಲಿ ಪುಣ್ಯ ತುಂಬಿ ತುಳುಕುವದು
ಶ್ರೀಮದ್ವೈಷ್ಣವ ಜನುಮವೆ ಜನ್ಮವೆನ್ನಿ
ಶ್ರೀಮದ್ಭಾಗವತ ಶ್ರವಣವೆ ಶ್ರವಣವೆನ್ನಿ
ಶ್ರೀಮದ್ವಿಷ್ಣು ಭಕ್ತಿ ಇದೆ ಮಹ ಭಕ್ತಿಯೆನ್ನಿ
ಯಾಮಯಾಮಕೆ ಸ್ಮರಿಸೆ ಸಕಲ ಸಂಪದವಕ್ಕು
ಈ ಮನೋ ಉತ್ಸಾಹ ಇಲ್ಲೆ ಪುಟ್ಟಿಂದೆ
ವ್ಯೋಮ ಗಂಗಾದಿ ಕ್ಷೇತ್ರ ನೋಡಲು ಆದದಿದಕೋ
ತಾಮರಸ ಪೀಠನ್ನ ಲೋಕಕ್ಕೆ ಸಮವಿಬುಧ
ಸ್ತೋಮ ಕೊಂಡಾಡದೆ ಸರ್ವಾಗಮದಿಂದ
ತಮಬುದ್ಧಿನಾಶವಹುದು ಚರಮಯಾತ್ರಿ ಇದೆ
ಶಮದಮ ಗುಣದಲ್ಲಿ ಮುಕ್ತರೊಳಗಿಪ್ಪ
ರಮಾ ಮನೋಹರ ನಮ್ಮ ವಿಜಯವಿಠಲರೇಯಾ
ನೇಮ ನಿತ್ಯದಲ್ಲಿ ಮನಸು ಕೊಡುವನು ನಿತ್ಯದಲ್ಲಿ || ೫ ||
ಜತೆ –
ಮಧ್ವರಾಯರ ಕರುಣ ಪಡೆದು ಪಾವನರಾಗಿ
ಸಿದ್ಧನಾಗುವದು ವಿಜಯವಿಠಲನ ಪೊಂದಿ || ೬ ||
********