Showing posts with label ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ mahipati. Show all posts
Showing posts with label ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ mahipati. Show all posts

Wednesday 1 September 2021

ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ankita mahipati

 ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಪ 


ಅನುಭವಕಾಗುವ ಚಂದ ಸ್ವಾನುಭವದÀ ಕಂದ ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ 1 

ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ ನಂತಾನಂತಕೆ ಸಂತತ ನೀನೆ ಏಕಾಂತ ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ 2 

ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ ಲೇಸುಲೇಸಾಗಿಹ ಆತ್ಮನುಭವ ಖೂನ ಈಶ ನೀನೊಬ್ಬನಾಗಿಹ ಅನುದಿನ ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ 3

***