Showing posts with label ಮರಣ ಕಾಲವ ತಿಳಿಸೋ ಮಧುಸೂದನಾ indiresha. Show all posts
Showing posts with label ಮರಣ ಕಾಲವ ತಿಳಿಸೋ ಮಧುಸೂದನಾ indiresha. Show all posts

Monday, 2 August 2021

ಮರಣ ಕಾಲವ ತಿಳಿಸೋ ಮಧುಸೂದನಾ ankita indiresha

ಮರಣ ಕಾಲವ ತಿಳಿಸೋ ಮಧುಸೂದನಾ ಪ


ಶರಣು ಬಂದವರ ಭಯಹರಣಾ ಅ.ಪ.


ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿe್ಞÁನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1

ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2

ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3

ಹಿಂದೆ ಮುಂದೆ ದಿನದ ನಿಂದೆ ಸಂಸ್ಕಾರದಲಿಸಂದೇಹ ಚಿಂತಿಸಿರಿ ಎಂದೊಲಿದ ಚಂದ್ರು ಚಕ್ಷ ಚರನಾಸುಂದರ ಮುಖ ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4

ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5

****