Audio by Vidwan Sumukh Moudgalya
ಶ್ರೀ ವ್ಯಾಸರಾಜರ ಕೃತಿ
ರಾಗ : ಮೋಹನ ಆದಿತಾಳ
ಪತ್ರವ ಕಳುಹಿದಳಾ ರುಕ್ಮಿಣಿದೇವಿ ಪತ್ರವ ಕಳುಹಿದಳು ॥ಪ॥
ಪತ್ರವ ನೋಡಿ ಗೌರಿ ಯಾತ್ರಾ ಕಾಲದಿ ಕೃಷ್ಣ
ಗಾತ್ರ ಪವಿತ್ರ ಮಂಗಳಸೂತ್ರ ಕಟ್ಟೆಂದು ॥ಅ.ಪ॥
ನಮ್ಮಣ ನಮ್ಮ ತಂದೆಯ ಮಾತು ಕೇಳದೆ
ನಿಮ್ಮ ದೂಷಿಸಿ ನೀಚೆಗೆ
ನಮ್ಮನ್ನು ಇತ್ತು ಮೂರೇಳು ಕುಲಗಳನು
ಘಮ್ಮನೆ ನರಕದೊಳ್ ಮುಣುಗಿಸುತ್ತನೆಂದು ॥೧॥
ಸುಣ್ಣ ಜಾಜಿಗಳದಿಂದ ಗ್ರಾಮಗಾಮಗಳ ಪೂಸಿ
ರನ್ನದ ತೋರಣಗಳ ಕಟ್ಟಿ
ಪುಣ್ಯವಾಚನ ಮಾಡಿಸಿ ವಿಪ್ರರಿಂದ
ಪೂರ್ಣಫಲ ಮಂಟಪ ಸ್ವಾಪವಾಯಿತೆಂದು ॥೨॥
ನೀ ಬಾರದಿದ್ದರೆ ಹಬ್ಬ ಸೂರಾಯಿತು
ತಬ್ಬಿಬ್ಬು ಆಗೋದು ಕುಲಕೆಲ್ಲ
ಅಬ್ಬರದಿಂದ ಗರುಡಗಮನ ಬಂದು
ತಬ್ಬಿಬ್ಬುಕೊಂಡೊಯ್ಯೊ ಶ್ರೀಕೃಷ್ಣ ಬೇಗ ॥೩॥
******