ankita janakiramana
ರಾಗ: ಸುರಟಿ ತಾಳ: ಆದಿ
ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ ಪ
ಮರೆಯದೆ ಶರಣಾಗತರನು ಪೊರೆಯುವ
ಕರುಣಾ ವಾರಿಧಿ ನೀವೆನುತ ಅ. ಪ
ಪರಿಪರಿ ಶಾಸ್ತ್ರಗಳ ಪಠಿಸುತ ಅ-
ದರ ಸಾರ ಗ್ರಹಿಸಲಿಲ್ಲ
ಗುರುಗಳ ಚರಣವ ಭಜಿಸದ ಮನುಜನು
ಧರಣಿಗೆ ಭಾರವು ಆಗಿಹನು 1
ನಿರುತದಿ ಗುರುಚರಣ ಭಜಿಸಲು
ದೊರಕದು ಅರಕ್ಷಣವು
ಪೊರೆಯಲು ಸತಿಸುತರೆಲ್ಲರ ಅನುದಿನ
ತಿರುಗಿದೆ ಇಡಿದಿನ ಊರೊಳಗೆ 2
ಅನ್ಯರನಾನರಿಯೆ ಗುಣನಿಧಿ ನಿ-
ಮ್ಮನು ನಾ ಮರೆಯೆ
ಜಾನಕಿರಮಣನ ಗುಣಗಳ ಪಾಡಲು
ಜ್ಞಾನವ ಕರುಣಿಸು ನೀ ಧೊರೆಯೇ 3
***