Audio by Mrs. Nandini Sripad
by Gokavi Anantadreesharu / Gokavi Ananthacharyaru 1770 - 1850
by ಶ್ರೀ ಗೋಕಾವಿ ಅನಂತಾಚಾರ್ಯ
ರಾಗ ಬಾಗೇಶ್ರೀ ಆದಿತಾಳ
ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ।
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ॥ ಪ ॥
ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ।
ಬಡವರಂತತಿ ಬಾಯ ಬಿಡುವರಲ್ಲವರು ॥ ಅ ಪ ॥
ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ।
ಮುಂಚೆ ತಿಳಿವರು ಈ ಪ್ರಪಂಚದಲ್ಲಿ ॥
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ।
ಪಂಚ ಮಹಾಪಾಪಗಳ ಮುಂಚೆ ಕಳೆಯುವರು ॥ 1 ॥
ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ।
ಅಂಗದಲಿ ಸುರಿವರು ಕಂಗಳುದಕವ ॥
ಮಂಗಳಾಂಗನ ಅಂತರಂಗದಿ ಸ್ಮರಿಸುತ್ತ ।
ಮುಂಗೈಯ್ಯ ಮುದ್ರೆಗಳ ಧರಿಸುವರಿವರು ॥ 2 ॥
ವಾಸುದೇವನ ದಾಸ ದಾಸರಾದೆವೆಂಬೊ ।
ಆಶೆಯಲಿ ಅವನ ಸಹವಾಸ ಬಯಸುವರು ॥
ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ।
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ॥ 3 ॥
*****
ಗೋಕಾವಿ ಅನಂತಾದ್ರಿ ಶ್ರೀ ಅನಂತಾಚಾರ್ಯರ ಕೃತಿ
(ಶ್ರೀಅನಂತಾದ್ರೀಶ ಅಂಕಿತ)
ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||pa||
ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ
ಬಡವರಂತತಿ ಬಾಯ ಬಿಡುವರಲ್ಲವರು ||a.pa||
ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು
ಮುಂಚೆ ತಿಳಿವರು ಈ ಪ್ರಪಂಚದಲ್ಲಿ
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು
ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು ||1||
ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು
ಅಂಗದಲಿ ಸುರಿವರು ಕಂಗಳೊದಕವ
ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ
ಮುಂಗೈಯ್ಯ ಮುದ್ರೆಗಳ ಧರಿಸುವರಿವರು||2||
ವಾಸುದೇವನ ದಾಸ ದಾಸರಾದೆವೆಂಬೊ
ಆಶೆಯಲಿ ಅವನ ಸಹವಾಸ ಬಯಸುವರು
ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ||3||
********