Showing posts with label ಏಸು ದಿನಗಳಾದರೆನೋ ನಿನಗೆ krishnavittala ankita suladi ಸುಳಾದಿ. Show all posts
Showing posts with label ಏಸು ದಿನಗಳಾದರೆನೋ ನಿನಗೆ krishnavittala ankita suladi ಸುಳಾದಿ. Show all posts

Monday, 2 August 2021

ಏಸು ದಿನಗಳಾದರೆನೋ ನಿನಗೆ krishnavittala ankita suladi ಸುಳಾದಿ

 ಧ್ರುವತಾಳ

ಏಸು ದಿನಗಳಾದರೆನೋ ನಿನಗೆ ಘಾಸಿ ಜೀವವೆಲೇಶ e್ಞÁನ ಭಕುತಿ ವೈರಾಗ್ಯ ಪುಟ್ಟಲಿಲ್ಲವೀಸು ಕಾಸಿಗೆ ಕ್ಲೇಶಪಡುತ ಆಶೆ ಮಾಡುವಿ ಮರುಳರಸನೇಂದ್ರಿಯ ಬಾಪಲ್ಯ ಬಿಡದೆ ನಾಯಿಯಂತೆ ಆಶೆ ಯಿಂದಲಿ ತಿರುಗುವಿತನುವಿನಭಿಮಾನವ ತುಸ ತೊರೆಯಲೊಲ್ಲೆನೂರೆಂಟುಕಾಲ ಬದುಕಲು ಪೋಷಿಸುವಿ ಕಾಯದಂಡಿಸಲಂಜುವಿಮರಳಿ ಮರಳಿದರೂ ಹೇಸಿಗೆ ಸಂಸಾರ ಸ್ಥಿರವೆಂ¨ ಭ್ರಾಂತಿ ಬಿಡದೈಯ್ಯಏಸುಏಸು ಜನುಮಗಳಲ್ಲಿ ಅನುಭವಿಸಿದರೂಹೊಸಹೊಸದಾಗಿ ತೋರುತಿರ್ಪುದು ತುದಿಮೊದಲಿಲ್ಲಹಿಂಸೆ ಮಾಡಿ ಪರರ ದ್ರವ್ಯದಿ ಒಡಲ ತುಂಬುವಿಹೊಸದೆಂದು ತಿಂದದ್ದೆ ತಿನ್ನುವಿ, ಮಾಡಿದ್ದೆ ಮಾಡುವಿಹೇಸಿಕೆ ಮನವೆ ನಾಚಿಕೆ ಇಲ್ಲವೆ ನಿನಗೆ ಯೋಚಿಸುಈ ಶರೀರ ಧರಿಸಿದ್ದು ಊಟತಿಂಡಿ ಗಾಯಿತಲ್ಲೋವಾಸುದೇವನ ಒಲಿಸುವ ಹಾದಿಕಾಣದೆ ಶ್ವಾನಪಶುವಿನಂದದಿ ಪೊರೆವೆ ಹೊಟ್ಟೆ, ದಿನ ದಿನದಿ ಕ್ರೋಧಆಶಾಲೊಭ ಮೋಸ ಅರಿಷಡ್ವರ್ಗಗಳ ಜಯಿಸಲಿಲ್ಲಅಸುಗಳೋತ್ತಮನ ಮತಗ್ರಂಥಗಳೋದದೆ ದಂಡಈ ಶರೀರವ ಬೆಳೆಸಿದೆ, ದಾನ ಧರ್ಮಕರ್ಮಗಳಿಲ್ಲದಾಶರಥಿಯ ದಾಸನೆಂದು ಕುಣಿಯಲಂಜುವಿಓಸು ಜನರು ಬಂಧುಗಳೆಲ್ಲ ನಿನ್ನ ಭಂಗಪಡಿಸೋರೆಲ್ಲಶ್ರೀಶಕೃಷ್ಣನ ನಾಮ ಒಂದಲ್ಲದೆ ಬೇರೆ ತಾರಕವಿಲ್ಲಕೇಶವನಪಾಡಿ ಪೊಗಳೋದೇ ಸಾಧನಕೇಳಯ್ಯಾವಾಸುದೇವನ ಮನಮುಟ್ಟಿ ಪೂಜಿಸೋದೇ ಯಜ್ಞಜಪಬ್ಯಾಸರದೆ ದಾಸನೆಂತೆಂದು ಚಿಂತಿಸಿ ಎರಗಿದರೆ ಬೇಗನೆಸಂಸಾರ ಬಿಡಿಸಿ ಇಡುವನು, ತನ್ನ ಭಕ್ತರ ಜನರೊಡನೆಮೋಸಹೋಗದೆ ಶ್ರೀಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲನನಿಸ್ಸಂಶಯದಿ ಮೊರೆ ಹೋಗಿ ಭವಪಾಶನೀಗೋ ಮರುಳೇ 1

ಮಟ್ಟತಾಳ

ಹಿಂದೆ ಮಾಡಿದ ಕರ್ಮ ಇಂದು ಅನುಭವಿಸುತ್ತಿರುವಿಇಂದು ಮಾಡುವ ಕರ್ಮ ಮುಂದೆ ಉಣ್ಣಲಿಬೇಕೋಬಂಧು ಗೋವಿಂದನ ಬಿಟ್ಟರೆ ಭವಣೆ ತಪ್ಪದೋ ಮೂಢಹಿಂದೆ ನಿನಗೆಷ್ಟು ಮಡದಿ ಮಕ್ಕಳು ಅಗಿಹೋದರೋಹಂದಿಯಂದದಿ ಬಯಸಿದ್ದೆ ಬಯಸುತ್ತಚಂದದಿಂದಲಿ ಊಟತಿಂಡಿಗಳ ತಿನ್ನುತ್ತಅಂದಣವನೇರಿ ಮೆರೆಯ ಬೇಕೆಂಬುವಿಮುಂದಿನ ಭವಣೆಗೆ ದಾರಿಯನೋಡೋ ಮರುಳೆ ಆ-ನಂದತೀರ್ಥರು ತೋರಿದ ಹಾದಿಯ ಹಿಡಿದುನಂದನಂದನ ಶ್ರಿ ಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲ ತಂದೆ ಎಂತೆಂದು ನೆನೆ ನೆನೆದು ಸುಖಿಯಾಗ ಬೇಕು 2





ರೂಪಕತಾಳ

ಸತಿಯೆಗತಿ ಎಂಬೆಯಾ ಮೂಢ ಒಡವೆ ತಂದರೆ ದೂತರು ಸೆಳೆವಾಗ ನಿನ್ನಹತ್ತಿರ ಬರಳು ಕಾಣೋಗತಿ ತನಗೇನು ಮುಂದೆಂದು ರೋದಿಸುವಳುಪಿತನೆಂದು ಅಕ್ಕರೆ ಮಾಡುವ ಇಲ್ಲದಿದ್ದರೆಮತ್ತು ಅನ್ನವನಿಕ್ಕದೆ ಸತಿಯ ಅಧೀನದಲ್ಲಿಡುವಎತ್ತ ನೋಡಿದರೂ ನಿಜ ಪ್ರೇಮ ಒಬ್ಬರಲ್ಲಿಲ್ಲ ಅನಿ-ಹೊತ್ತು ಹೊತ್ತಿಗೆ ಉತ್ತಮೋತ್ತಮ ನಮ್ಮ ಹರಿಯನೆನೆ-ಯುತ್ತ ಜಯತೀರ್ಥವಾಯ್ವಂತರ್ಗತ ಶ್ರೀ ಕೃಷ್ಣವಿಠಲನ್ನಪ್ರೀತಿಯ ಪಡೆದು ಕೃತ ಕೃತ್ಯನಾಗೋನೀನು 3




ಝಂಪೆತಾಳ

ಗಾಣದೆತ್ತಿನಂತೆ ದಿನದಿನ ಧನವನಿತೆಗಾಗಿದಣಿದು ದಣಿದರೆ ಫಲವೇನಯ್ಯ ನೆರೆಹೊರೆಜನರೆಲ್ಲ ನಿನ್ನ ಹೊಗಳಿದರೆ ಬಂದ ಭಾಗ್ಯವೇನೋದೀನನೆನಿಸಿ ಹೀನಜನ ಸೇವೆಯ ಮಾಡಿ ಬಲು ಹೇರುಧನಗಳಿಸಿ ಮಡದಿ ಮಕ್ಕಳ ಸಾಕಿದರೆ, ಮುಂದೆನಿನ್ನ ಯಮದೂತರೆಳೆವಾಗ ಕಾಯಬಲ್ಲರೇನೋದಾನವಾಂತಕನ ಮರೆತು ದೋಷಿಯಾಗಲು ಬೇಡ ಈತನುವು ದೇವ ಕೊಟ್ಟದ್ದು ಮುಕುತಿ ಸಾಧನಕೆ ಕಾಣೋಅನುದಿನವು ವನಿತೆಯರ ಕೂಡಿ ತಿಂದು ತೇಗುವುದಕ್ಕಲ್ಲe್ಞÁನ ದೀಪವ ಹಚ್ಚಿ ಮನದಿ ನೋಡುತನುಮನ ಧನಗಳೆಲ್ಲ ಶ್ರೀ ಹರಿಗರ್ಪಿಸು ನರಹರಿಜನಾರ್ದನ ಮುಕುಂದ ಮಾಧವನೆಂದು ಕೊಂಡಾಡುಏನೇನು ಮಾಡುವುದೆಲ್ಲ ಶ್ರೀ ಕೃಷ್ಣಸೇವೆಂದ್ಹೇಳುಕಾನನ ಊರು ಎಲ್ಲಿದ್ದರು ಸತತ ನಾರಾಯಣನ ನಾಮವನೆನೆಯುತ್ತ ಸಂಸಾರದಲ್ಲಿದ್ದರೂ ಮಮತೆ ತೊರೆದುಮನದಿ ವಿರಕ್ತಿಯ ಧರಿಸಿ ದೇವ ಕೊಟ್ಟದರಲ್ಲಿದಿನವೂ ತೃಪ್ತಿಪಡುತಲಿ ಅನಿಲನ ಮತಪಿಡಿದುಅಣುರೇಣು ತೃಣಕಾಷ್ಠ ಪರಿಪೂರ್ಣ ಜಯತೀರ್ಥಅನಿಲಾಂತರ್ಗತ ಶ್ರೀ ಕೃಷ್ಣವಿಠಲನ ದಾಸನಾಗಿ ಬಾಳೋ ಮುಂದೆ 4






ತ್ರಿವಿಡಿತಾಳ

ಆಳುದ್ದದ ಶರೀರವ ಗೇಣು ಮಾಡಿಕೊಂಡು ಪರರಆಳಾಗಿ ಬಾಳಲು ವೀಸಕಾಸು ಕೊಡಲು ಕಷ್ಟ ವೈಯ್ಯಶ್ರೀ ಲಕ್ಷ್ಮೀಕಾಂತ ಪೊರೆ ಎಂದು ಗಜರಾಜ ಒದರಲು ಅರಸಿಗೆಹೇಳದೆ ಭರದಿ ಗರುಡನೇರಿ ಬಂದು ನಕ್ರನ ತರಿದಚೇಲವಸ್ತ್ರದಿ ತಂದಿದ್ದ ದ್ವಿಜ ಪಿಡಿಯವಲಕ್ಕಿಯತಿಂದು ಕು-ಚೇಲಗೆ ಕೆಡದ ಸಂಪದವಿತ್ತು ಸಲಹಿದನಾರಿ ದ್ರೌಪದಿ ಗೋಳು ಕೇಳುತಲೆ ಅಕ್ಷಯವಸ್ತ್ರವ ಅಲ್ಲಿಂದ ಪಾಲಿಸಿದಗೊಲ್ಲಗೋಪಿಯರ ಸೊಲ್ಲು ಲಾಲಿಸಿ ಪ್ರೀತಿಗೊಲಿದಮೆಲ್ಲನೆ ಕುಬುಜೆಯ ಡೊಂಕು ತಿದ್ದಿ ಅಂಗಸಂಗವನಿತ್ತಕ್ಷುಲ್ಲ ಬೈಗಳಬೈದ ಶಿಶುಪಾಲನ ಸುಜೀವಗೆ ಗತಿ ಯನಿತ್ತನಲ್ಲನೆಂದಡಿಗೆರಗಿದ ಪಾಂಡವರ ಬಂಡಿ ಭೋವನಾದಮೆಲ್ಲನೆ ಅಪದ್ಭಾಂಧವ ಶ್ರೀ ಕೃಷ್ಣನೆಂದೊದರಿ ಒಂದುದಳ ತುಳಸಿ ದಳ ಅರ್ಪಿಸಲು ಒಡಲು ಕಾಯುತ ಲಕ್ಷ್ಮೀ-ನಲ್ಲನ ಕರುಣಕ್ಕೆ ಎಣೆಯಿಲ್ಲ ಸಾರಿಸಾರಿ ಹೇಳುವೆ ಕೇಳು ಮರಳು ಮನವೆಕ್ಷುಲ್ಲ ಮಾನವರ ಸೇವಕನೆನಿಸಲು ನಾಚಿಕಿಲ್ಲವು }ಸಿರಿ ಪದ್ಮಜ ವಂದಿಪೆನಾಲ್ಕು ಮೂರೆರೆಡು ಲೋಕಾಧೀಶ ಅತುಳಮಹಿಮ ಜಯತೀರ್ಥವಾಯ್ವಂತರ್ಗತ ಶ್ರೀ ಕೃಷ್ಣವಿಠಲನ್ನಆಳಾಗಿ ಬಾಳಲು ನಾಚಿಕೆ ಯಾಕೋ ಹೀನ ಮನವೆ 5

ಅಟ್ಟತಾಳ

ಹೊಟ್ಟೆಗೇನೆಂದು ಯೊಚಿಸಿ ಕೆಡಬೇಡ ಈರೇಳುಸೃಷ್ಟಿಗೈದ ಸರ್ವೋತ್ಕøಷ್ಟ ಶ್ರೀಕೃಷ್ಣಗೆ ಇದು ಕಷ್ಟವೆಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರನೇಗಟ್ಟ್ಯಾಗಿ ಅಷ್ಟಕರ್ತ ಒಡೆಯನ ಚರಣವ ನೆರೆನಂಬಿಬಿಟ್ಟು ಸಂಸಾರದ್ಹಂಬಲದ ದಾಸನಾಗಿ ತಿರುಗೋಹುಟ್ಟು ಸಾಯುವ ಕಟ್ಟು ಬಿಡಿಸಲು ಅನ್ಯ ಉಪಾಯವಿಲ್ಲಎಷ್ಟು ದಿನಗಳಿದ್ದರೂ ಸಂಸಾರದಾಶೆಗೆ ಕೊನೆ ಇಲ್ಲನಿಷ್ಠೆಯಿಂದಲಿ ಶ್ರೀ ಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲನ್ನಇಟ್ಟು ಮನದಲಿ ಭಜಿಸೋ ಅರಿಷಡ್ವರ್ಗವೈರಿಗಳಅಟ್ಟೋಭರದಿ ತುಂಟಜನರ ಸಂಗ ತ್ಯಜಿಸೋ ಬೇಗಇಷ್ಟಾರ್ಥಪಾಲಿಸಿ ಕಾಯುವ ಕೃಷ್ಣ ಸಂದೇಹ ಬ್ಯಾಡಾ ಸಂದೇಹ ಬ್ಯಾಡಾ 6


ಜತೆ

ಎಂದಿಗಿದ್ದರು ಈ ಕೊಂಪೆ ಸ್ಥಿರವಲ್ಲ ಮನವೆಇಂದೇಶ್ರೀ ಜಯತೀರ್ಥವಾಯ್ವಂತರ್ಗತ ಕೃಷ್ಣವಿಠಲನ ಮೊರೆಹೊಗೋ ಮನವೇ ||

****