ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರುರಾಯ ನಿಮ್ಮ ಕರುಣಲೆನ್ನ ಹೊರೆವುದು ಪ
ಒಂದು ಅರಸಿ ದ್ವಂದ್ವಹರಿಸಿ ಮೂರು ಹುರಿಸಿ ಮೀರಿ ನಿಲಿಸಿ ನಾಲ್ಕು ಮರೆಸಿ ಐದು ಜರೆಸಿ ಆರು ತೋರಿಸಿ ಎನ್ನಹೊರೆವುದು 1
ಏಳು ಅರಸಿ ಎಂಟು ಜರಿಸಿ ಒಂಬತ್ತು ಬಲಿಸಿ ಹತ್ತು ಹರಿಸಿ ಅರಿಸಿ ಬೆರಿಸಿ ಇರಿಸಿ ನಿಮ್ಮ ಕರುಣಕೃಪೆಯಲೆನ್ನ ಹೊರೆವುದು 2
ಐದು ಅರಿಸಿ ಐದು ಬೆರಿಸಿ ಐದು ನಿಮ್ಮ ಚರಣಲಿರಿಸಿ ಸುರಿಸಿ ಕರುಣ ಮಳೆಯಗರಿಸಿ ಮಹಿಪತಿ ಜನ್ಮಹರಿಸಿ ಹೊರೆವುದು 3
***