ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ
ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1
ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2
ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
***