Showing posts with label ಏನು ಚೆಲುವಿಯೋ ಅಂಬುಜ ನಿಲಯಳೇನು indiresha. Show all posts
Showing posts with label ಏನು ಚೆಲುವಿಯೋ ಅಂಬುಜ ನಿಲಯಳೇನು indiresha. Show all posts

Saturday, 28 December 2019

ಏನು ಚೆಲುವಿಯೋ ಅಂಬುಜ ನಿಲಯಳೇನು ankita indiresha

ಏನು ಚೆಲುವಿಯೋ ಅಂಬುಜ ನಿಲಯಳೇನು ಚಲುವಿಯೋ ಪ

ಏನು ಚೆಲುವಿ ಇವಳ ಸುಂದರಾನನವ ನೋಡೆ ಭವದಬೇನೆ ಕಳೆದು ಹರಿಯ ಮುಕ್ತಿಸ್ಥಾನ ಕೊಡುವಳುಕರುಣಿ ಒಲಿದು ಸರಪಹಾಸದಿ ಕುಂತಳದಿ ಶೋಭಿಪಸುರಭಿ ತಿಲಕದಿ ವಿಚಿತ್ರ ಓಲೆ ಕರ್ಣ ಭೂಷದಿಮಸ್ತಕದಿ ಮಣಿಯು ಪುರುಟ ಭೂಷದಿತರಣಿ ಕೋಟಿಯಂತೆ ಪೊಳೆವ ಶರಧಿನಾಥ ಸ್ತುತಿಯ ಕೇಳಿಮರುಳುಗೊಂಡ ಹರಿಯು ವಕ್ಷಸ್ಥಳದೊಳಿಟ್ಟು ಸಾಕುತಿಹನು 1

ಸರಗಿ ಪದಕವೊ ಕೊರಳೊಳಗೆ ನಲಿವ ಜರ ವಸನವೊಕಾಂಚನಾದಿ ಕಾಂಚಿ ಸರಸ ಮಧ್ಯದಿ ಪರಮ ಋಷಿಯ ಕೂಡಿಮಿಥಿಲಪುರದ ರಾಜ ಜನಕಸುತೆಯ ಕರವ ಪಿಡಿದನುಹರನ ಧನುವ ಮುರಿದು ಸರಯೂನಲ್ಲಿ ಸುಖಿಪ 2

ಮಂದಗಮನಿಯೋನಿ ಅಹೇಂದ್ರವಾದ ಮಂದಶಯನಿಯೊವಿದರ್ಭರಾಜನಂದ ತನುಜೆಯೋ ಸಭಕ್ತರಿಗೆ ಬಂಧಕ ಮುನಿಯೊದ್ವಂದ್ವ ಭಾಗದೊಳಗೆ ರಾಜವೃಂದ ನಿಂತು ಕಾಯುತಿರಲುಇಂದಿರೇಶನ ಪಾಣಿಪಿಡಿದು ಸುಂದರಾಂಗಿ ಮದುವೆಯಾದ 3
**********