Showing posts with label ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ mahadevapuravasa. Show all posts
Showing posts with label ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ mahadevapuravasa. Show all posts

Thursday 5 August 2021

ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ ankita mahadevapuravasa

 ..

ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ

ಧ್ಯಾನಿಸಿ ಸಂತತ ಗುರುವರ್ಯನ ಪ


ದುರಿತ ಮೋಹ ದುಃಖ ದೂರ ನೂಂಕಿ ಕಾಯ್ವ

ಪರಮ ಪಾವನಮೂರ್ತಿಯ 1

ಕಾಮಿತಾರ್ಥಗಳನು ಪ್ರೇಮದಿಕೊಡುವನ

ಭೀಮಮಿತ್ರನ ನೀವು 2

ಪಾಪಪುಣ್ಯವೆಲ್ಲ ಶ್ರೀಪತಿಗರ್ಪಿಸಿ

ಗೋಪತಿಯನು ನಂಬಿ ಧ್ಯಾನಿಸಿ 3

ಧರೆಯೊಳು ಮಹದೇವಪುರದ ಶ್ರೀರಂಗನ

ಮರೆಯದೆ ಭಾವ[ಶುದ್ಧ]ದೊಳ್ 4

***