Showing posts with label ವಿಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ vijaya vittala. Show all posts
Showing posts with label ವಿಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ vijaya vittala. Show all posts

Thursday, 17 October 2019

ವಿಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ankita vijaya vittala

ವಿಜಯದಾಸ
ವಿಠ್ಠಲ ವಿಮಲಶೀಲ ಬಾಲಗೋಪಾಲ
ದಿಟ್ಟ ಮೂರುತಿ ಶ್ರೀಲೋಲ ಪ

ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ

ಯದುವಂಶೋದ್ಭವ ಕೇಶವ ಹೇ ಏಕಮೇವ
ಮಧುವೈರಿ ಮಹಾವೈಭವ
ಸದಮರಾನಂದ ಸ್ವಭಾವ ಮತ್ಕುಲ ದೈವ
ಇನ ಬಾಂಧವ
ವಿಧಿನದಿಪಿತ ನಾರದ ಮುನಿ ಸನ್ನುತ
ವೈರಿ ಸದಮಲಗಾತುರ
ಪದೆ ಪದೆಗೆ ಸಂಪದವಿಯ ಬಯಸುವ
ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ1

ನಿತ್ಯ ಪ್ರಭಾವ
ಪತಿತಪಾವನ ಸುರ ಜೀವ
ಅತಿಶಯ ಲೀಲಾಮಾನವ ನರಕಂಠೀರವ
ಚ್ಯುತಿ ಪೂರಾನಾದಿ ಗುರುಗೋವ
ರತಿಪತಿಪಿತ ಶತಕ್ರತು ಸುತ ಸಾರಥಿ
ಪಥ ಹಿತವಾಗಿ ತೋರೊ ಮಾ-
ರುತ ಮತ ಶ್ರಿತಜನ ಚತುರರ ಸತತ ಸಂ -
ದಿತಿಸುತ ಮಥನ 2

ಶರಣು ಶರಣು ಸರ್ವೇಶ ಇಟ್ಟಿಗೆವಾಸ
ದುರುಳರ ಸಂಗ ವಿನಾಶ
ಪರಮ ಪುರುಷ ವಿಲಾಸ ನಿರವಕಾಶ
ವರಪ್ರದ ಪೂರ್ಣಪ್ರಕಾಶ
ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ
ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ
ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ 3
***********

ವಿಠಲ ವಿಮಲಶೀಲ ಬಾಲಗೋಪಾಲ
ದಿಟ್ಟ ಮೂರುತಿ ಶ್ರೀಲೋಲ ll ಪ ll

ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ
ಗೊಟ್ಟು ಸಲಹೊ ಜಗಜಟ್ಟಿ ಫಂಡರಿರಾಯ ll ಅಪ ll

ಯದುವಂಶೋದ್ಭವ ಕೇಶವ ಹೇ ಏಕಮೇವ 
ಮಧುವೈರಿ ಮಹಾವೈಭವ 
ಸದಮಲಾನಂದ ಸ್ವಭಾವ ಮತ್ಕುಲ ದೈವ
ಹೃದಯಾಬ್ಜ ಇನ ಬಾಂಧವ
ವಿಧಿನದೀಪಿತ ನಾರದ ಮುನಿ ಸನ್ನುತ
ಕದನ ಕರ್ಕಶ ವೈರಿ ಸದಮಲಗಾತುರ 
ಪದೆ ಪದೆಗೆ ಸಂಪದವಿಯ ಬಯಸುವ
ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ ll 1 ll

ತುತಿಪರ ದೇವ ಪ್ರಾರ್ಥಿಪ ನಿತ್ಯ ಪ್ರಭಾವ 
ಪತಿತಪಾವನ ಸುರ ಜೀವ
ಅತಿಶಯ ಲೀಲಾಮಾನವ ನರಕಂಥೀರವ 
ಚ್ಯುತಿ ಪೂರಾನಾದಿ ಗುರುಗೋವ
ರತಿಪತಿಪಿತ ಶತಕ್ರತು ಸುತ ಸಾರಥಿ
ತುತಿಸುವೆ ಗತಿ ಪಥ ಹಿತವಾಗಿ ತೋರೊ ಮಾ-
ರುತ ಮತ ಶ್ರಿತಜನ ಚತುರರ ಸತತ ಸಂ-
ಗತಿ ಕೊಡು ಮುಕುತಿಗೆ ದಿತಿಸುತ ಮಥನ ll 2 ll

ಶರಣು ಶರಣು ಸರ್ವೇಶ ಇಟ್ಟಿಗೆವಾಸ
ದುರುಳರ ಸಂಗ ವಿನಾಶ 
ಪರಮ ಪುರುಷ ವಿಲಾಸ ನಿರವಕಾಶ 
ವರಪ್ರದ ಪೂರ್ಣಪ್ರಕಾಶ
ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ 
ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ
ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡು
ಧೊರೆ ವಿಜಯವಿಠಲ ಪುರಂದರಪ್ರಿಯ
******