ಎಳೆಯಷ್ಟಮಿ ಹಾಡು
#ಎಳೆ #ಅಷ್ಟಮಿ #ಹಾಡು
ಎಳೆ ಅಷ್ಟಮಿ ಪ್ರಯುಕ್ತ ಒಂದು ಹಾಡು ಜಾನಪದ ಧಾಟಿಯಲ್ಲಿ
ಅಷ್ಟಮಿ ಬರುತಿದೆ ಎಳೆಯಷ್ಟಮಿ ಬರುತಿದೆ
ಅಷ್ಟಮಿ ಗೌರಿಯ ಪೂಜೆಯ ಸಮಯ ಬರುತಿದೆ
ನಿಷ್ಠೆ ಶ್ರದ್ಧೆ ಭಕ್ತಿಗೊಲಿವ ಜಗದಂಬೆ ಪಾದದಿ
ವಿಶೇಷವಾಗಿ ಶರಣಾಗುವ ಸಮಯ ಬರುತಿದೆ
ಸಂಪತ್ತು ಶುಕ್ರವಾರದಿ ಪೂಜೆ ಮಾಡಿದ ದೇವಿಯ
ಸಂಪನ್ನಳ ತಂಗಿಯ ಕರೆತಂದು ಜೊತೆ ಕೂರಿಸಿ
ಸಂತತ ಆನಂದ ಕೊಡುತ ನಿಲ್ಲೆಂದು ಸ್ತುತಿಸಿ
ಅಂದದ ಮಂಟಪದೊಳಗೆ ಪ್ರತಿಷ್ಠಾಪಿಸಿ
ಒಳಗಿನ ಭಕ್ತಿಯಿಂದ ಪೂಜೆಯನ್ನು ಮಾಡಿ
ಹೊಳೆವ ಪಡವಲ ಹೂಗಳ ಸಮರ್ಪಿಸಿ
ಬಳೆ ಅರಿಶಿನ ಬೇರು ಕೊಬ್ಬರಿ ಅಕ್ಕಿ ಉಡಿ ತುಂಬಿಸಿ
ಹೋಳಿಗೆ ಚಿತ್ರಾನ್ನ ಪಾಯಸ ನೈವೇದ್ಯ ಅರ್ಪಿಸಿ
ಹೊಳೆವ ತುಪ್ಪದ ದೀಪದ ಆರತಿಯ ಎತ್ತಿ
ನಳಿನನಯಳ ಕಥೆ ಹೇಳುತ ಎಳೆಗಳ ಕಟ್ಟಿ
ಬಾಲಗೋಪಾಲವಿಠಲನ ಕರೆತಾರೆಂದು ಪ್ರಾರ್ಥಿಸಿ
ಎಳೆಯ ಕಟ್ಟಿಕೊಂಡು ಶರಣಾಗಿ ನಮಿಸಿ
***