..
kruti: tandevaradagopala vittala (ಪ್ರಹ್ಲಾದಗೌಡರು)
ಭೂತರಾಜ
ಭೂತರಾಜನೆ ಕೇಳು ಯನ್ನ ಭಾವಿ ಲಿಖಿತಾವನ್ನು ಸೂಚಿಸು ಭವದಿ ಬಹು ಭೀತಿಗೊಳಿಪ ಭೌತಿಕ ಜೀವಿಗಳಾ ನೀ ದೂರಮಾಡಿ ಯನ್ನ ಗಾರುಮಾಡದೆ ಸಲಹಾಬೇಕುಕಾರುಣ್ಯ ನಿಧಿಯೇ ನಿನ್ನ ವನಜಪಾದದಲ್ಲಿ ನವವಿಧಾ ಭಕುತಿ ಕೊಟ್ಟು ನವನಿಧಿ ಚರಣ ಸರೋಜವನ್ನು ಹೃತ್ಸರಸೀದಾಲ್ಲ ಪೊಳೆವಂತೆ ಮಾಡೊಪಾಪಿ ಜನರ ತಾಪಾ ಸಹಿಸಲಾರೆನೋ ದೇವಾ ಶ್ವಾಸ ನಿಯಾಮಕ ಪ್ರೀಯಾ ಸ್ವಾದಿ ಪುರವಾಸಿ ತಂದೆವರದಗೋಪಾಲವಿಠ್ಠಲನ ದೂತಾ 1
ಪಾಪಿ ಜನರ ಕೂಡಾ ಸ್ನೇಹವ ಮಾಡಿ ಪಾಪಕೂಪದೊಳಗೆ ಮುಳುಗಿ ಅಪಾರಪಾತಕಕೆ ಒಳಗಾಗಿ ತಾಪ ಬಡುವ್ಯನೊ ಯನ್ನಾ ಬಾಪನೆ ಮನ್ನೀಸಿ ಪಾಲಿಪರ ನಾ ಕಾಣೆನೊ ದೇವಾ ಕೈಪಿಡಿದು ಮುಂದಕೆ ಕರೆದು ಮನ್ನಿಪ ಧೊರಿ ಅಂದರೆ ನೀನಲ್ಲದೆ ಇನ್ನುಂಟೆ ಬಾಧೆ ಬಿಡಿಸಿ ನಿನ್ನ ದಾಸರ ವ್ಯೂಹದೊಳಿಡು ದಾಶ್ಯವನಿತ್ತು ದಾತ ಜನಕೆ ತಂದೆವರದ-ಗೋಪಾಲವಿಠ್ಠಲನ ನಿಲ್ಲಿಸುವಂತೆ ಕೃಪೆ ಮಾಡೈ 2
ಕಷ್ಟದೊಳಿದ್ದವರ ಕಷ್ಟದಿಂದೆತ್ತಿ ಪಾಲಿಸುವಿ-ತುಷ್ಟಿಯಾದವನ ಉತ್ಕøಷ್ಟ ಮಾಡುವಿ ದುಷ್ಟಿಯಾದವನ ಕಷ್ಟದೊಳಿಟ್ಟು ಸುಖಾಪಡಿಸುವಿ ದೃಷ್ಟಿ ಹೀನರಿಗೆ ದಿವ್ಯ ದೃಷ್ಟಿಯಾ ನೀವಿ ಯಷ್ಟು ಮಾಡಿದರೇನು ನಿನ್ನ ಪಾದಪದ್ಮವನ್ನು ಮನಮುಟ್ಟಿ ಭಜಿಸೋ ತನಕಾ ಸೃಷ್ಟಿಯೊಳಗೆ ಅತಿ ಸ್ಪಷ್ಟವಾದ e್ಞÁನ ಪುಟ್ಟದು ಕಾಣೋ ನಿರ್ದಿಷ್ಟ ಶಿಖಾಮಣಿ ತಂದೆವರದಗೋಪಾಲವಿಠಲನ ಆಪ್ತಾ 3
ದೂಷಿಯಾದವನ ನಿರ್ದೋಷ ಮಾಡುವಿ ದಾಸನೆಂದವನ ಪೋಷಿಸುವಿ ದೂಷಿಪರ ಘಾಸಿಗೊಳಿಸುವಿ ಹಂಸವಾಹನ ಪದ ಪೊಂದುವರ ಸಂಶಯಮಾಡದೆ ಸಮ್ಮೋದವಿತ್ತು ಸಲಹುವಿ ಶೂಲಧಾರಿಯೆ ನಿನ್ನ ಹಾಸಕೆ ನಮೋ ನಮೋಪಾಶದಿಂದ ಪಾಶಿಸಾದೆ ಸಲಹೋ ಪಾಶುಧರ ಪಾಲಾ ಪಶುಪತಿಯೋಗ್ಯಾ ಶಿರಹಾರ ಧಾರಿ ಮೃಗರಾಜ ಸೇವಕ ನದಿಧರಲಾಶಾಮಾನಿಲಯಾ ತಂದೆವರದಗೋಪಾಲವಿಠ್ಠಲನ ಪ್ರೀಯಾ 4
ಕಾಮಜನಕನದಿ ಕಾಮಹರನೆ ಪರಿಪೂರ್ಣಕಾಮಾ ಯನ್ನ ಕಾಮನಾ ವಶಮಾಡಿ ಕಾಮಪಡಿಸುವುದುಚಿತವೇ ಪರ ಕಾಮಿನೀಯಳ ಕಾಮುಕತನದಿಂದ ಕಾಮಿಸೇ ಕಾಮಾರಿಗಳೆಲ್ಲ ನೋಡಿ ಕಾಮಿಸುವರೈಕಾಮನಯ್ಯನಾ ಪ್ರೇಮದಿ ಕಾಂಬುವ ಯಾಮ ಯಾಮಕೆ ನಿನ್ನ ನಾಮ ಸ್ಮರಿಸುವಂತೆ ಮಾಡು ಕಾಮವಂದಿತ ತಂದೆವರದಗೋಪಾಲವಿಠ್ಠಲನ ತೋರೋ 5
ಜತೆ :ಭೀತಿಯಾ ಬಿಡಿಪಾ ದಾತಾನು ನೀನಯ್ಯ ಭೂತ ವಂದಿತ ತಂದೆವರದಗೋಪಾಲವಿಠಲನ ಭಜಕಾ 6
***