Showing posts with label ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ gurumahipati. Show all posts
Showing posts with label ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ gurumahipati. Show all posts

Wednesday 1 September 2021

ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ ಪ 


ತಂತ್ರಸಾರದಿಂದ ಪೂಜೆ ಮಂತ್ರದಿಂದ ಮಾಡಿ ಡಂಭ | ಯಂತ್ರದೊಳಗ ಸಿಲ್ಕ ಸಿಂತ್ರ ಹೋದರಲ್ಲದೇ 1 

ಶಾಸ್ತ್ರವನೋದಿ ಹೇಳಿ ನಿಸ್ತರಿಸಿ ವಾದದಿಂದ | ದುಸ್ತರ ಹಮ್ಮಿನೊಳಗಸ್ತ ವಾದರಲ್ಲದೇ 2 

ಇದ್ದು ಉಪವಾಸದಿಂದ ಉಗ್ರತಪವ ಮಾಡಿ | ಸಿದ್ಧಿಗಳ ತೋರಿ ಮೆರೆದು ಬಿದ್ದು ಹೋದರಲ್ಲದೇ 3 

ಹಲವು ಕರ್ಮಗಳ ಮಾಡಿ ಫಲವ ಬೇಡಿಕೊಂಡು ತನ್ನ | ಘಳಿಕೆಯ ಸಂಸಾರದಿ ಕಳೆದುಕೊಂಡರಲ್ಲದೇ 4 

ಇಂದಿರೆಪತಿಯ ಮನದಿಂದ ಅರಿತು ಪೂಜಿಸುವ | ತಂದೆ ಮಹಿಪತಿ ಪ್ರಭು ಹೊಂದಿದವರಲ್ಲದೇ 5

***