Showing posts with label ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ hayavadana. Show all posts
Showing posts with label ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ hayavadana. Show all posts

Wednesday, 1 September 2021

ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ ankita hayavadana

 ..

ನಾರಾಯಣ ನಾರಾಯಣ ನಾರಾಯಣ ನಾರಾಯಣ

ನಾರಾಯಣ ಲಕ್ಷುಮಿ ಅರಸನೇ ಪ.


ನಾರಾಯಣ ಲಕ್ಷುಮಿಅರಸನೆ ಹಯವದನ

ಸ್ವಾಮಿ ನೀ ಒಲಿದು ದಯವಾಗು ಅ.ಪ.


ಕಾಮವೆಂಬ ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?)

ಲೋಭಮೋಹಗಳನುವಾದೊ

ಲೋಭಮೋಹಗಳನುವಾದೊ ಹಯವದನ

ಸ್ವಾಮಿ ನೀ ಒಲಿದು ದಯವಾಗು 1


ಮನುಗಳ ಕಾಲದಲ್ಲಿ ಜಲದೊಳಗವತರಿಸಿ

ಜಗವೇಳು ಧರೆಯ ನೆಗಹಿದೆ

ಜಗವೇಳು ಧರೆಯ ನೆಗಹಿದೆ ಹಯವದನ

ಮತ್ಸ್ಯವತಾರ ದಯವಾಗು 2


ಕೂರ್ಮಾವತಾರದಲಿ ಭೂಮಿಯ ನೆಗಹಿದೆ

ಕೂಡೆ ಸಜ್ಜನರ ಸಲಹಿದೆ

ಕೂಡೆ ಸಜ್ಜನರ ಸಲಹಿದೆ ಹಯವದನ

ಕೂರ್ಮಾವತಾರ ದಯವಾಗು 3


ವರಾಹಾವತಾರದಲಿ ದುರುಳ ದಾನವಗಂಜಿ

ಕೋರೆದಾಡೆಯಲಿ ನೆಗಹಿದೆ

ಕೋರೆದಾಡೆಯಲಿ ನೆಗಹಿದೆ ಹಯವದನ

ವರಾಹಾವತಾರ ದಯವಾಗು 4


ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ

ಭಕ್ತನಿಗಭಯ ಸಲಿಸಿದೆ

ಭಕ್ತನಿಗಭಯ ಸಲಿಸಿದೆ ಹಯವದನ

ಅಪ್ಪ ನರಸಿಂಹ ದಯವಾಗು 5


ವಾಮನನಾಗಿ ನೀ ಭೂಮಿದಾನವ ಬೇಡಿ

ಭೂಮಿ ಪಾದದಲಿ ಅಳೆದೆಯೊ

ಭೂಮಿ ಪಾದದಲಿ ಅಳೆದೆಯೊ ಹಯವದನ

ವಾಮನಾವತಾರ ದಯವಾಗು 6


ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ

ಮತ್ತೆ ಕೊಡಲಿಯ ಪಿಡಿದೆಯೊ

ಮತ್ತೆ ಕೊಡಲಿಯ ಪಿಡಿದೆಯೊ ಹಯವದನ

ಅಪ್ಪ ಭಾರ್ಗವನೆ ದಯವಾಗು 7


ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ

ಪಾತಕಿ ರಾವಣನ ಮಡುಹಿದೆ

ಪಾತಕಿ ರಾವಣನ ಮಡುಹಿದೆ ಹಯವದನ

ಖ್ಯಾತ ರಘುನಾಥ ದಯವಾಗು 8


ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ

ಹೆತ್ತವಳ ಬಂಧನ ಬಿಡಿಸಿದೆ

ಹೆತ್ತವಳ ಬಂಧನ ಬಿಡಿಸಿದೆ ಹಯವದನ

ಕೃಷ್ಣಾವತಾರ ದಯವಾಗು 9


ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ

ಮತ್ತೆ ಹಯವೇರಿ ಮೆರೆದೆಯೊ

ಮತ್ತೆ ಹಯವೇರಿ ಮೆರೆದೆಯೊ ಹಯ[ವದನ

ಉತ್ತಮ ಬೌದ್ಧ ಕಲ್ಕಿ ದಯವಾಗು] 10


ಅಂಗಜನಯ್ಯನೆ ಮಂಗಳಮಹಿಮನೆ

ಗಂಗೆಯ ಪೆತ್ತ ಗರುವನೆ

ಗಂಗೆಯ ಪೆತ್ತ ಗರುವನೆ ಹಯವದನ

ಮಂಗಳ ಮಹಿಮ ದಯವಾಗು 11


ವಾದಿರಾಜರಿಗೊಲಿದೆ ಸ್ವಾದೆಪುರದಲಿ ನಿಂತೆ

ವೇದಾಂತ ಕಥೆಯ ಹರಹಿದೆ

ವೇದಾಂತ ಕಥೆಯ ಹರಹಿದೆ ಹಯವದನ

ವೇದಮೂರುತಿಯೆ ದಯವಾಗು 12

***