Showing posts with label ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ karpara narahari. Show all posts
Showing posts with label ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ karpara narahari. Show all posts

Monday, 2 August 2021

ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ankita karpara narahari

ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ

ಪ್ರೇಮ ಪಾತ್ರನೆ ಪಾಹಿಮಾಂ ಪ


ಭೂಮಿಯೊಳು ಶೇವಿಸುವರಿಗೆ ಸುರ

ಭೂಮಿರುಹ ವೆಂದೆನಿಸಿ ಪೊರೆಯಲು

ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ

ಭೀಮನೆನಿಸಿದ ಅ.ಪ


ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ

ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ

ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ

ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ

ಯೊಳಗೆ ನೆಲಸಿಹ 1


ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ

ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ

ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ

ನಮೋ ನಮೋ 2


ಶ್ರೀದನಾe್ಞÁದಿ ಬಂದು ಮೇದಿನಿಯೊಳು

ಪುಟ್ಟಿಮೇದಿನಿ ಸುರಸದ್ಮದಿ

ಮೋದ ತೀರ್ಥಾಹ್ವಯನೆನಿಸಿ ಬಹುವಾದಿ

ಗಜ ಪಂಚಾಸ್ಯನೆನಿಸಿಸು

ಬೋಧದಾಯಕ ಶಾಸ್ತ್ರವಿರಚಿಸಿ ಸಾಧು

ಜನಕತಿ ಮೋದನೀಡಿದ 3


ವಂದಿಪ ಜನರಘ ವೃಂದವಾರಿದ

ಗಣಕೆ ಗಂಧವಾಹನನೆನಸಿ

ಬಂದು ಪದುಮಾವತಿಯ ಪರಿಣಯವೆಂದು

ಶೇಷ ಗಿರೀಂದ್ರಯಾತ್ರೆಗೆ

ಇಂದ್ರ ದಿಕ್ಕಿನ ದ್ವಾರದಲಿ ನೀನಿಂದು ಭಕುತರ

ವೃಂದ ಸಲಹುವಿ 4


ಭಾರತೀಶನೆ ನಿನ್ನ ಚಾರುಚರಣಯುಗ್ಮ

ಶೇರಿದವನೆ ಧನ್ಯನೋ

ಘೋರ ಪಾತಕಿಯಾದ ವಿಪ್ರನು ಸಾರಿ

ಭಜಿಸಿ ವಿಮುಕ್ತನಾದನು

ನಾರದನು ಬಂದಿಲ್ಲಿ ಶೇವಿಸಿ ಸೇರಿದನು

ಸುರಋಷಿಯ ಪದವನು 5


ಮೇಲೆ ಗೋಪುರದಿ ಭೂಪಾಲ ನಿರ್ಮಿತ

ಸುವಿಶಾಲ ಮಂಟಪ ಮಧ್ಯದಿ

ಕಾಲ ಕಾಲಗಳಲ್ಲಿ ವಿಭವದಿ ವಾಲಗವ

ಕೈಕೊಳುತ ಭಕುತರ

ಮ್ಯಾಳದಿಂ ಪಾಂಚಾಲಿರಮಣ ಕೃಪಾಳೊ

ಗುರುವರ ಪಾಲಿಸೆನ್ನನು 6


ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ

ತುಂಗರಥದೋಳ್ ಕುಳಿತು ನೋಳ್ಪಜನಂಗಳಿಗೆ

ಸರ್ವೇಷ್ಟದಾಯಕ

ಮಂಗಳಪದ ಕಾರ್ಪರದ ನರಸಿಂಗನಿಗೆ

ಪ್ರಥಮಾಂಗನೆನಿಸಿದ 7

****