Showing posts with label ಗುರುವೆ ಕರುಣದಿಂದ ನೋಡೋ ನಿನ್ನ shreeshakeshava vittala. Show all posts
Showing posts with label ಗುರುವೆ ಕರುಣದಿಂದ ನೋಡೋ ನಿನ್ನ shreeshakeshava vittala. Show all posts

Friday, 27 December 2019

ಗುರುವೆ ಕರುಣದಿಂದ ನೋಡೋ ನಿನ್ನ ankita shreeshakeshava vittala

ಗುರುವೆ ಕರುಣದಿಂದ ನೋಡೋ – ನಿನ್ನ
ತರಳನೆಂದು ದಯಮಾಡೋ                || ಪ ||
ದುರುಳರೊಳತಿದುರುಳ ನರ ನಾ
ಮೊರೆಯ ಪೋಗುವೆನು – ಪೊರೆಯೊ ಅಸ್ಮದ್ಗುರುವೆ        || ಅ ||

ಸುಧೀಂದ್ರಕರಕಂಜಜಾತ – ಈ ವ
ಸುಧೆಯೊಳು ಪರಮಪ್ರಖ್ಯಾತ
ಸದಮಲ ಶುಭಗುಣನಿಧಿ ನಿರ್ಮಲಜ್ಞಾನ
ಪ್ರದ ಪ್ರೇಕನಾಗಿ ಮದಡಮತಿಯ ಬಿಡಿಸೋ
ಪದುಮನಾಭನ ಪದಪದುಮ ಪದೋಪದೆಗೆ
ಹೃದಯದಿ ಮುದದಿ ಧೇನಿಪ – ಮುದಮುನಿಮತ ಉದಧಿಗೆ ಚಂದ್ರ        || ೧ ||

ಪಂಚಬಾಣನ ನಿರಾಕರಿಸಿ – ಪಂಚ
ಪಂಚಕರಣವ ಸ್ವೀಕರಿಸೀ
ಪಂಚಮುಖನೆ ಪರನೆಂಬ ವಾದಿಯ ಮತ
ಮುಂಚೆ ಮುರಿದನೆಂದು ಸಂಚಕಾರವ ಪಿಡಿದು
ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ
ಸರ್ವಜಮನನೋವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ    || ೨ ||

ದೇಶದೇಶದಿ ತವಕೀರ್ತಿ ತುಂಬಿ
ಸೂಸಿಪರಿವದೆಂಬ ವಾರ್ತಿ
ಲೇಸಾಗಿ ಕೇಳಿ ಬಂದಾ ಸುಜನರ ಮನದಾಸೆ
ಪೂರೈಸು ವಿಶೇಷ ಫಲವ ನಿತ್ಯ
ಮಾ ಸರೋಹ ವ್ಯೋಮಕೆಶಾಮರೇಶಮುಖರಿಗೆ
ಈಶನೆನಿಸುವ ಶ್ರೀಶಕೇಶವವಿಠ್ಠಲನ ದಾಸಾ – ತುಂಗಾನಿವಾಸ        || ೩ ||
*******