Showing posts with label ಜಯವೆನ್ನಿ ಜನರೆಲ್ಲ ಸ್ವಾಮಿ ಭವರೋಗವ್ಶೆದ್ಯಗೆ ಭಾವಜನಯ್ಯಗೆ hayavadana. Show all posts
Showing posts with label ಜಯವೆನ್ನಿ ಜನರೆಲ್ಲ ಸ್ವಾಮಿ ಭವರೋಗವ್ಶೆದ್ಯಗೆ ಭಾವಜನಯ್ಯಗೆ hayavadana. Show all posts

Wednesday, 1 September 2021

ಜಯವೆನ್ನಿ ಜನರೆಲ್ಲ ಸ್ವಾಮಿ ಭವರೋಗವ್ಶೆದ್ಯಗೆ ಭಾವಜನಯ್ಯಗೆ ankita hayavadana

 ..

ಜಯವೆನ್ನಿ ಜನರೆಲ್ಲ ಸ್ವಾಮಿ

ಭವರೋಗವ್ಶೆದ್ಯಗೆ ಭಾವಜನಯ್ಯಗೆ

ಕುವಲಯಧರಸ್ವಾಮಿಗೆ ನಾರಾಯಣ ಪ.


ಆಗಮಚೋರನ ಗೆಲಿದ ರಾಮ

ಬೇಗನೆ ಸುರರಿಗೆ ಸುಧೆಯೆರೆದ ಕೃಷ್ಣ

ನಾಗಲೋಕವ ಹೊಕ್ಕವನ ಕೊಂದಾಗ ಶಿಶು

ಕೂಗೆ ಕಂಬದಿ ಬಂದಗೆ ನಾರಾಯಣ 1


ಭಾಗೀರಥಿಯ ಪಡೆದೆ ರಂಗ

ಬಾಗಿಸಿ ತಾಯ ಶಿರವ ಕಡಿದೆ ರಾಮ

ಯಾಗರಕ್ಷಕ ತುರುಗಾಯಿ ಲಜ್ಜೆಯ

ನೀಗಿದಶ್ವವಾಹಕಗೆ ನಾರಾಯಣ 2


ಜಲದೊಳಗಾಳ್ದನ ಸೀಳ್ದ ರಾಮ

ಅಲಸದೆ ಗಿರಿಯ ಬೆನ್ನಲಿ ತಾಳ್ದ ಕೃಷ್ಣ

ನೆಲನ ಕದ್ದೊಯ್ದಸುರನ ಮರ್ದಿಸಿದ ಶಿಶು-

ಗೊಲಿದು ಬಲಿಯ ತುಳಿದೆ ನಾರಾಯಣ 3


ಛಲಪದದಿ ರಾಯರ ಕಡಿದೆ ರಾಮ

ಬಲು ಬಿಲ್ಲನು ಕರದಲ್ಲಿ ಪಿಡಿದೆ ಕೃಷ್ಣ ಕೋ-

ಡುಳ್ಳವ ಕೋಪದ ಮುಖ ದೈನ್ಯದಿ

ಬೇಡುವೆ ಕೊಡಲಿಗಾರ ನಾರಾಯಣ 4


ರೂಢಿಯೊಳು ರಾಯರ ಗೆಲಿದ ರಾಮ

ಓಡಿ ಹೊಕ್ಕನೆ ದುರ್ಗದ ಜಲ ಕೃಷ್ಣ

ನೋಡೆ ನಾರಿಯರ ವ್ರತವಳಿದೆ ಹಯವದನ

ರೂಢರಾವುತನಾದ ನಾರಾಯಣ5

***