ವಾದಿರಾಜಾ ವಾದಿರಾಜಾ ವಾದಿರಾಜ
ನೀ ಕರುಣದಿ ಕಾಯಬೇಕೀ
ಮನ್ನಿಸಬೇಕು ಯನ್ನ ವಾಕು ಪ.
ನೀ ದೂರ ನೋಡದಿರು ಎನ್ನಾರು ಕರಪಿಡಿಯುವರಿಲ್ಲಾ
ಭವ ಮಡುವಿನೊಳಗಿರುವೆನು ದಡಕೆ ಸೇರಿಸು ನೀನು ಅ.ಪ.
ಆರು ಕಾಯುವರಿಲ್ಲಾ ಸೇರಿದೆ ನಿನಗಲ್ಲಾದೆ
ಸಂಸಾರ ಶರಧಿಯೊಳು ಈಸಲಾರೆನು
ಘಾಸಿಪಡಿಸಲಾಗದು ನೀನು
ಆಶಾ ತೋರಿಸಿ ಮೋಸ ಮಾಡುವದು ಇದು ತರವೇ ಗುರುವೇ 1
ಯಂದಿಗೆ ಬರುತೀಯೋ
ಸುಂದರ ಮೂರುತಿಯೆ
ಪಂಚ ವೃಂದಾವನ ಛಂದಾನೋಳ್ಪರಿಗೆ
ಆನಂದಾ ಎನ್ನ ಹೃದಯಮಂದಿರದಲ್ಲಿ
ಸಂದರುಶನ ಕೊಡು ಇಲ್ಲಿ 2
ಅನಾಥನು ನಾನು ಯನ್ನ ಪೊರೆವ ದಾತನು ನೀನು
ಋಜುಗಣಧ್ವರಿಯೇ ಕಾಳಿಮರ್ದನಕೃಷ್ಣನ ಮರಿಯೆ 3
****