ದುರ್ಗಾ ರಾಗ ತಾಳ ತ್ರಿತಾಳ
ಶ್ರೀ ರಾಮಾ ರಾಮಾ ||ಪ||
ಜಯ ಜಯಾತ್ಮರಾಮಾ
ದಯಗುಣದಿ ನಿಸ್ಸೀಮಾ
ಮಾಯಾರಹಿತನುಪಮಾ-
ಕಾಯಾ ಕೃಪಾನಿಧಿ ನಮ್ಮಾ ||೧||
ಮುನಿಜನರಾ ಪ್ರತಿಪಾಲಾ
ದೀನಬಂಧು ದೀನದಯಾಳಾ
ಘನಸುಖದ ಕಲ್ಲೋಳಾ
ನೀನಹುದೈ ಅಚಲಾ ||೨||
ಕರುಣಾಬ್ಧಿ ನೀನೇ ರಾಮಾ
ಹರಹೃದಯ ವಿಶ್ರಾಮಾ
ತರಮಹೀಪತಿ ನಿಮ್ಮ
ಸ್ಮರಿಸುವ ಪಾದಪದ್ಮ ||೩||
*********
ಶ್ರೀ ರಾಮಾ ರಾಮಾ ||ಪ||
ಜಯ ಜಯಾತ್ಮರಾಮಾ
ದಯಗುಣದಿ ನಿಸ್ಸೀಮಾ
ಮಾಯಾರಹಿತನುಪಮಾ-
ಕಾಯಾ ಕೃಪಾನಿಧಿ ನಮ್ಮಾ ||೧||
ಮುನಿಜನರಾ ಪ್ರತಿಪಾಲಾ
ದೀನಬಂಧು ದೀನದಯಾಳಾ
ಘನಸುಖದ ಕಲ್ಲೋಳಾ
ನೀನಹುದೈ ಅಚಲಾ ||೨||
ಕರುಣಾಬ್ಧಿ ನೀನೇ ರಾಮಾ
ಹರಹೃದಯ ವಿಶ್ರಾಮಾ
ತರಮಹೀಪತಿ ನಿಮ್ಮ
ಸ್ಮರಿಸುವ ಪಾದಪದ್ಮ ||೩||
*********