ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ.
ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1
ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2
ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
***